• Home  
  • ಕಾಪು: ಸ್ಕೂಟಿಗೆ ಕಾರು ಡಿಕ್ಕಿ, ಸ್ಕೂಟಿ ಸವಾರ ಸಾವು (Kaup: Car collides with scooty, scooty rider dies)
- ಅಪಘಾತ

ಕಾಪು: ಸ್ಕೂಟಿಗೆ ಕಾರು ಡಿಕ್ಕಿ, ಸ್ಕೂಟಿ ಸವಾರ ಸಾವು (Kaup: Car collides with scooty, scooty rider dies)

Share: ಕಾಪು: ಸ್ಕೂಟಿಗೆ ಕಾರು ಡಿಕ್ಕಿ, ಸ್ಕೂಟಿ ಸವಾರ ಸಾವು ಭಾನುವಾರ ಸಂಜೆ ಕಾಪು ಕೆ1 ಹೋಟೆಲ್ ಎದುರು ರಾಹೆ 66ರಲ್ಲಿ ನಡೆದ ಘಟನೆ   (Kaup)ಕಾಪು : ಸ್ಕೂಟರ್ – ಕಾರು ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟು ಕಾರು ಚಾಲಕ ಗಾಯಗೊಂಡ ಘಟನೆ ಭಾನುವಾರ ಸಂಜೆ ಕಾಪು ಕೆ1 ಹೋಟೆಲ್ ಎದುರು ರಾಹೆ  66 ರಲ್ಲಿ ಘಟಿಸಿದೆ.   ಮೂಳೂರು ನಿವಾಸಿ ಮಯ್ಯದ್ದಿ (60) ಮೃತ ವ್ಯಕ್ತಿ.   ಇವರು ಕಾಪುವಿನಿಂದ ಬಂದು ಕೆ1 ಹೊಟೇಲ್ […]

  (Kaup)ಕಾಪು : ಸ್ಕೂಟರ್ – ಕಾರು ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟು ಕಾರು ಚಾಲಕ ಗಾಯಗೊಂಡ ಘಟನೆ ಭಾನುವಾರ ಸಂಜೆ ಕಾಪು ಕೆ1 ಹೋಟೆಲ್ ಎದುರು ರಾಹೆ  66 ರಲ್ಲಿ ಘಟಿಸಿದೆ.

  ಮೂಳೂರು ನಿವಾಸಿ ಮಯ್ಯದ್ದಿ (60) ಮೃತ ವ್ಯಕ್ತಿ.

  ಇವರು ಕಾಪುವಿನಿಂದ ಬಂದು ಕೆ1 ಹೊಟೇಲ್ ಮುಂಭಾಗ ರಾಹೆ 66 ರಲ್ಲಿ ಯೂಟನ್೯ ತೆಗೆದುಕೊಳ್ಳುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ.

   ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡು ಕಾರಿನ ಮುಂಭಾಗ ಜಖಂಗೊಂಡಿದೆ. ಸ್ಕೂಟರ್ ಡಿಕ್ಕಿಯಾದ ಸಂದರ್ಭ ಸವಾರನ ಹೆಲ್ಮೆಟ್ ಕಾರಿನ ಗಾಜಿನಲ್ಲಿ ಸಿಲುಕಿಕೊಂಡಿತ್ತು. ಕಾರಿನ ಏರ್ ಬ್ಯಾಗ್ ತೆರೆದು ಕೊಂಡು ಚಾಲಕ ಅಪಾಯದಿಂದ ಪಾರಾಗಿದ್ದಾನೆ.

  ತಕ್ಷಣ ಉಚ್ಚಿಲದ ಸಮಾಜ ಸೇವಕ ಜಲಾಲುದ್ದೀನ್‌ ಮತ್ತು ಹಮೀದ್‌ ರವರು ಎಸ್ಡಿಪಿಐ ಅಂಬುಲೆನ್ಸ್‌ ನಲ್ಲಿ ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರಾದರೂ  ದಾರಿ ಮಧ್ಯೆ ಮಯ್ಯದಿ ಮೃತ ಪಟ್ಟಿದ್ದಾರೆ. ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.