• Home  
  • ಉಡುಪಿಯ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ” ಕೃತಿ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ (Dr. Rajalakshmi of Udupi’s work “Vatsalyad Osage” has been selected for a prestigious state-level award)
- ಸನ್ಮಾನ, ಅಭಿನಂದನೆ

ಉಡುಪಿಯ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ” ಕೃತಿ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ (Dr. Rajalakshmi of Udupi’s work “Vatsalyad Osage” has been selected for a prestigious state-level award)

Share: ಉಡುಪಿಯ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ” ಕೃತಿ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಪ್ರಶಸ್ತಿ ಪ್ರದಾನಿಸಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್ ಹನಗವಾಡಿ    (Udupi) ಉಡುಪಿ: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿಯು ನೀಡುವ ಪ್ರತಿಷ್ಠಿತ ‘ಡಾ. ಶ್ಯಾಮ್ ಪ್ರಸಾದ್ ವಾರ್ಷಿಕ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿ 2025-26’ ಕ್ಕೆ ಉಡುಪಿಯ ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ವಾತ್ಸಲ್ಯ ಕ್ಲಿನಿಕ್ […]

   (Udupi) ಉಡುಪಿ: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿಯು ನೀಡುವ ಪ್ರತಿಷ್ಠಿತ ‘ಡಾ. ಶ್ಯಾಮ್ ಪ್ರಸಾದ್ ವಾರ್ಷಿಕ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿ 2025-26’ ಕ್ಕೆ ಉಡುಪಿಯ ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ವಾತ್ಸಲ್ಯ ಕ್ಲಿನಿಕ್ ನ  ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆʼ ಮಹಿಳಾ ಆರೋಗ್ಯ ಸಂಗಾತಿ ಕೃತಿ ಆಯ್ಕೆಯಾಗಿದೆ.

  ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಪೂರ್ವಾಧ್ಯಕ್ಷರಾದ ವಾತ್ಸಲ್ಯ ಕ್ಲಿನಿಕ್ ನ ಡಾ. ರಾಜಲಕ್ಷ್ಮಿ ಅವರು ರೋಗಿಗಳ ಬದುಕು, ಭಾವನೆ ಮತ್ತು ಮಾನವೀಯ ಸಂಬಂಧಗಳನ್ನು ಕುರಿತಂತೆ ಬರೆದಿರುವ ಈ ಕೃತಿಯು ಓದುಗರ ಮನಮುಟ್ಟುವಂತಿದೆ .

  ಆಗಸ್ಟ್ 23 ಮತ್ತು 24 ರಂದು ದೊಡ್ಡಬಳ್ಳಾಪುರದ ನವೋದಯ ಶಾಲೆಯಲ್ಲಿ ನಡೆಯಲಿರುವ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.   

 ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್ ಹನಗವಾಡಿಯವರು ಪ್ರದಾನಿಸಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.