ಕಟಪಾಡಿ : ಬೀದಿನಾಯಿಗಳ ದಾಳಿಗೆ ಮೃತಪಟ್ಟ 5 ಆಡುಗಳು
ಕಟಪಾಡಿ ಗ್ರಾ.ಪಂ.ವ್ಯಾಪ್ತಿಯ ಅಚ್ಚಡದಲ್ಲಿ ನಡೆದ ಘಟನೆ
(Kaup) ಕಾಪು : ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಡುಗಳು ಬೀದಿನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟ ಘಟನೆ ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಅಚ್ಚಡದಲ್ಲಿ ಶನಿವಾರ ಮುಂಜಾನೆ ಘಟಿಸಿದೆ.
ಕಟಪಾಡಿ ಅಚ್ಚಡದ ನಿವೃತ್ತ ಶಿಕ್ಷಕ ವಿಠಲ ಶೇರಿಗಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಒಟ್ಟು 5 ಆಡುಗಳಿದ್ದು, ಇದರಲ್ಲಿ 2 ಮರಿಗಳು ಸೇರಿವೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಈ ಭಾಗದಲ್ಲಿ ಬೀದಿನಾಯಿಗಳ ಹಿಂಡು ಅಲೆದಾಡುತ್ತಿದ್ದು, ಶಾಲಾ ಮಕ್ಕಳು ಸಹಿತ ಸಾರ್ವಜನಿಕರು ಆತಂಕಿತರಾಗಿದ್ದಾರೆ.
ಬೀದಿ ನಾಯಿ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಸಹಿತ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.

