ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ನಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ
ವೈದ್ಯಕೀಯ , ಸಹಾಯಧನ, ಆಹಾರ ಸಾಮಾಗ್ರಿ ಮತ್ತು ಅಗತ್ಯ ಸಾಮಗ್ರಿ ವಿತರಣೆ
(Bantakal) ಬಂಟಕಲ್: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಂಟಕಲ್ ಕಟ್ಟಿಂಗೇರಿಯ ಮೂರು ವರುಷದ ಬಾಲಕ ಸುದೀಪ್ ಆಚಾರ್ಯ ನಿಗೆ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಸಹಾಯ ಹಸ್ತಿ ನೀಡಿದೆ.
ವೈದ್ಯಕೀಯ ಚಿಕಿತ್ಸೆಗೆ ರೂಪಾಯಿ 10,000 ನಗದು ಮತ್ತು ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದೆ.
ಸಹಾಯಹಸ್ತ ನೀಡಿದ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಅಧ್ಯಕ್ಷ ಮತ್ತು ಸದಸ್ಯರನ್ನು ಲಯನ್ಸ್ ಮಾಜಿ ಗವರ್ನರ್ ಲಯನ್ ಎನ್ ಎಂ ಹೆಗಡೆಯವರು ಅಭಿನಂದಿಸಿ ಅವರ ಈ ಮಾನವೀಯತೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಬಂಟಕಲ್ಲು ಜಾಸ್ಮಿನ್ ಲಯನ್ಸ್ ಸಂಸ್ಥೆಯವರು ಏರ್ಪಡಿಸಿದ ಲಯನ್ಸ್ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡುತ್ತಿದ್ದರು.
ಲಯನ್ಸ್ ಸಂಸ್ಥೆಯ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟ ಲಯನ್ ಎನ್ ಎಂ ಹೆಗಡೆಯವರು ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಸಂಸ್ಥೆಯ ಮಾಜಮುಖಿ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ತನ್ನ ವೈಯುಕ್ತಿಕ ಸಹಾಯ ನೀಡಿದರು.
ಈ ಸಮಾರಂಭದಲ್ಲಿ ಇತರ 5 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ಟನ್ನು ವಿತರಿಸಲಾಯಿತು.
ಇದೇ ಸಂಧರ್ಭದಲ್ಲಿ ಲ. ಎನ್. ಎಮ್ ಹೆಗಡೆಯವರನ್ನು ಲಯನ್ಸ್ ಪರವಾಗಿ ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಲಯನ್ ಸಿಂಥಿಯಾ ಡಿ. ಸೋಜಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಲ. ರೀನಾ ಡಿ’ಸೋಜ, ಕೋಶಾಧಿಕಾರಿ ಲ. ಅನಿತಾ ಮೆಂಡೋನ್ಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೖತ್ತ ಶಿಕ್ಷಕಿ ಮೇರಿ ಡಿ. ಸೋಜಾ ಹಾಗೂ ಲಯನ್ಸ್ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು. ಲ. ವೈಲೆಟ್ ಕಸ್ತಲಿನೋ ರವರು ಕಾರ್ಯಕ್ರಮ ನಿರೂಪಿಸಿದರು.

