• Home  
  •   ಅಥಣಿ : ಟ್ರಾಫಿಕ್‌ ಸಮಸ್ಯೆ ಸಿಗ್ನಲ್ ಇಲ್ಲದೆ ಹೈರಾಣಾದ ಸಾರ್ವಜನಿಕರು (Athani: Public frustrated by traffic problem and lack of signal)
- PROBLEMS

  ಅಥಣಿ : ಟ್ರಾಫಿಕ್‌ ಸಮಸ್ಯೆ ಸಿಗ್ನಲ್ ಇಲ್ಲದೆ ಹೈರಾಣಾದ ಸಾರ್ವಜನಿಕರು (Athani: Public frustrated by traffic problem and lack of signal)

Share:   ಅಥಣಿ : ಟ್ರಾಫಿಕ್‌ ಸಮಸ್ಯೆ ಸಿಗ್ನಲ್ ಇಲ್ಲದೆ ಹೈರಾಣಾದ ಸಾರ್ವಜನಿಕರು   ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ , ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಗೆ ಆಗ್ರಹ (Athani) ಅಥಣಿ: ಬೆಳಗಾವಿ ಜಿಲ್ಲೆಯ ಅತಿ ದೊಡ್ಡ ತಾಲೂಕು ಕೇಂದ್ರವಾದ ಅಥಣಿಯಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು, ಸಿಗ್ನಲ್‌ ವ್ಯವಸ್ಥೆ ಇಲ್ಲದೆ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.   ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ ಮತ್ತು ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದೆ ಸಂಚಾರಕ್ಕೆ ಬಾರಿ ಅಡಚಣೆಯಾಗುತ್ತಿದೆ. ಬಾಕಿ ಇರುವ ಬೇಡಿಕೆ […]

(Athani) ಅಥಣಿ: ಬೆಳಗಾವಿ ಜಿಲ್ಲೆಯ ಅತಿ ದೊಡ್ಡ ತಾಲೂಕು ಕೇಂದ್ರವಾದ ಅಥಣಿಯಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು, ಸಿಗ್ನಲ್‌ ವ್ಯವಸ್ಥೆ ಇಲ್ಲದೆ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

  ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ ಮತ್ತು ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದೆ ಸಂಚಾರಕ್ಕೆ ಬಾರಿ ಅಡಚಣೆಯಾಗುತ್ತಿದೆ. ಬಾಕಿ ಇರುವ ಬೇಡಿಕೆ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ, ರೋಡ್ ಬ್ರೇಕರ್ ಹಾಗೂ ರಸ್ತೆ ಓವರ್ ಬ್ರಿಡ್ಜ್ ಅಗಲೀಕರಣ ತಕ್ಷಣ ಆಗಬೇಕಿದೆ ಎಂದು  ಸಾಮಾಜಿಕ ಹೋರಾಟಗಾರ ಮಹೇಶ್ ಎಮ್ ಶರ್ಮಾ, ಪ್ರವೀಣ್ ನಾಯಕ್  ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಬೆಂಗಳೂರು ರಾಜ್ಯ ಮಾಧ್ಯಮ ವಕ್ತಾರರು ಆಗ್ರಹಿಸಿದ್ದಾರೆ.

   ಅಥಣಿ ಕೆರೆ ಅಭಿವೃದ್ಧಿ, ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿ ಆರಂಭ ಹಾಗೂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು ಇವೆಲ್ಲವೂ ಜನರ ದಶಕಗಳ ಬೇಡಿಕೆಯಾಗಿದೆ. ಮುರುಗೇಂದ್ರ ಶಿವಯೋಗಿ ರೈಲ್ವೆ ನಿಲ್ದಾಣ ಸಿದ್ಧೇಶ್ವರ ವಿಮಾನ ನಿಲ್ದಾಣ ಪುರಸಭೆ ಇದ್ದದ್ದದ್ದನ್ನು ನಗರಸಭೆ ವರ್ಗಾವಣೆ ಕೆರೆಯ ಅಭಿವೃದ್ಧಿ ಜಿಲ್ಲೆಯ ಕಾರ್ಯಾಲಯಗಳು ಹಾಗೂ ಹಾಗೂ ಅಥಣಿ ಜಿಲ್ಲಾ ಕೇಂದ್ರದ ಘೋಷಣೆಗಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚಿದೆ.  

  ತಾಲೂಕು ಆಡಳಿತ, ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಡಳಿತ, ರಾಜ್ಯ ಸರ್ಕಾರ, ರಾಜ್ಯ ಸರ್ಕಾರದ ಸಚಿವರು  ಸಮಸ್ಯೆಗಳನ್ನು ಬಗೆಹರಿಸುತ್ತಾರೋ, ಯಥಾಸ್ಥಿತಿ ಮುಂದುವರಿಸುತ್ತಾರೋ ಎಂದು ಕಾದು ನೋಡಬೇಕಿದೆ.

ಸಾಮಾಜಿಕ ಹೋರಾಟಗಾರ ಮಹೇಶ್ ಎಮ್ ಶರ್ಮಾ

Leave a comment

Your email address will not be published. Required fields are marked *

eMedia Kannada  @2025. All Rights Reserved.