ಮರಕಡ; ಜಮಾತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ
ಸಯ್ಯದ್ ಅಬ್ದುರ್ರಹ್ಮಾನ್ ಸಆದಿ ಅಲ್ಹಾದಿ, ಸದಸ್ಯರಿಂದ ಧ್ವಜಾರೋಹಣ
(Marakada) ಮರಕಡ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮರಕಡ, ಕುಂಜತ್ತಬೈಲ್ ನ, ಸಿದ್ದೀಖ್ ಜುಮಾ ಮಸ್ಜಿದ್, ಜಮಾತುಲ್ ಮುಸ್ಲಿಮೀನ್ ಕಮಿಟಿ, ಅಲ್ ರೀಫಾಯಿಯಾ ನೂರುಲ್ ಇಸ್ಲಾಂ ಮದರಸ ಇಲ್ಲಿನ ಮಸೀದಿ ಆವರಣದಲ್ಲಿ ಆಗಸ್ಟ್ 15ರಂದು ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಗೌರವಪೂರ್ವಕವಾಗಿ ನೆರವೇರಿಸಲಾಯಿತು.
ಖತೀಬರಾದ ಸಯ್ಯದ್ ಅಬ್ದುರ್ರಹ್ಮಾನ್ ಸಆದಿ ಅಲ್ಹಾದಿ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಜೊತೆಗೂಡಿ ಧ್ವಜಾರೋಹಣ ಗೈದರು.
ಈ ಸಂದರ್ಭದಲ್ಲಿ, ಸದರ್ ಉಸ್ತಾದರಾದ ಸಲಾಂ ಹನಿಫಿ, ಮುಅಲೀಮ್ ಗಳಾದ ತಾಜುದ್ದೀನ್ ಮಿಸಬೈ, ಅಬೂಬಕ್ಕರ್ ಸಿದ್ದಿಕ್ ಇಮಾಮಿ, ಇಬ್ರಾಹಿಂ ಸಆದಿ, ಅಧ್ಯಕ್ಷರಾದ ಮೈಯದ್ದಿ ಬ್ಯಾರಿ, ಪ್ರಧಾನ ಕಾರ್ಯದರ್ಶಿ ಶಾಫಿ ಕೊದ್ರೋಳಿ, ಉಪಾಧ್ಯಕ್ಷರು ನೂರ್ ಮೊಹಮ್ಮದ್, ಕೋಶಾಧಿಕಾರಿ ಬಶೀರ್ ಬೈಕಂಪಾಡಿ, ಜೊತೆ ಕಾರ್ಯದರ್ಶಿ ಶೇಖ್ ಮೊಹಿದ್ದೀನ್, ಮಸೀದಿ ಉಸ್ತುವಾರಿ ನಸೀರ್ ಕಿನ್ನಿಕುಲ, ಲೆಕ್ಕಪರಿಶೋಧಕ ನವಾಜ್ ಮರಕಡ, ಸದಸ್ಯರುಗಳಾದ ಮನ್ಸೂರ್, ಇಬ್ರಾಹಿಂ ಅತ್ತ್ರಬೈಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಹುಸೈನ್ ರಿಯಾಝ್, ರಹೀಮ್ ಹಸನ್, ಆಕೀಬ್ ಜ್ಯೋತಿನಗರ, ಬದ್ರು ಮುನೀರ್, ಎಂ.ಎಚ್ ಮೊಹಮ್ಮದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

