• Home  
  • ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ (Rainwater harvesting is one of the needs of today: Farmer Vishwanath Nayak)
- ಸಂಘ, ಸಂಸ್ಥೆಗಳು

ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ (Rainwater harvesting is one of the needs of today: Farmer Vishwanath Nayak)

Share: ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಆಶ್ರಯದಲ್ಲಿ ನಡೆದ ಮಳೆ ನೀರು ಇಂಗಿಸುವಿಕೆ  ಕಾರ್ಯಕ್ರಮ (Bantakal) ಬಂಟಕಲ್:‌  ಇಂದಿನ ಬದಲಾಗುತ್ತಿರುವ ಹವಾಮಾನ, ದುರ್ಬಲವಾಗುತ್ತಿರವ ಮಳೆ ವೈಪ್ಯಾರಿತ್ಯವನ್ನು ಗಮನಿಸಿದಾಗ ಭವಿಷ್ಯದಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆ ಇದ್ದು, ಇದಕ್ಕೆ ನಾವು ಈಗ ಸುರಿಯುತ್ತಿರುವ ಮಳೆ ನೀರನ್ನು ಸಂಗ್ರಹಿಸುವ ಮಳೆ ನೀರು ಇಂಗಿಸುವಿಕೆ ಕಾರ್ಯಕ್ರಮವನ್ನು ಎಲ್ಲರೂ ಅನುಷ್ಠಾನಗೊಳಿಸುವಂತೆ ಕೃಷಿಕರಾದ ವಿಶ್ವನಾಥ ನಾಯಕರವರು ಮನವಿ ಮಾಡಿದ್ದಾರೆ.   ಲಯನ್ಸ್ […]

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಆಶ್ರಯದಲ್ಲಿ ನಡೆದ ಮಳೆ ನೀರು ಇಂಗಿಸುವಿಕೆ  ಕಾರ್ಯಕ್ರಮ

(Bantakal) ಬಂಟಕಲ್:‌  ಇಂದಿನ ಬದಲಾಗುತ್ತಿರುವ ಹವಾಮಾನ, ದುರ್ಬಲವಾಗುತ್ತಿರವ ಮಳೆ ವೈಪ್ಯಾರಿತ್ಯವನ್ನು ಗಮನಿಸಿದಾಗ ಭವಿಷ್ಯದಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆ ಇದ್ದು, ಇದಕ್ಕೆ ನಾವು ಈಗ ಸುರಿಯುತ್ತಿರುವ ಮಳೆ ನೀರನ್ನು ಸಂಗ್ರಹಿಸುವ ಮಳೆ ನೀರು ಇಂಗಿಸುವಿಕೆ ಕಾರ್ಯಕ್ರಮವನ್ನು ಎಲ್ಲರೂ ಅನುಷ್ಠಾನಗೊಳಿಸುವಂತೆ ಕೃಷಿಕರಾದ ವಿಶ್ವನಾಥ ನಾಯಕರವರು ಮನವಿ ಮಾಡಿದ್ದಾರೆ.

  ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇದರ ಆಶ್ರಯದಲ್ಲಿ ನಡೆದ ಮಳೆ ನೀರು ಇಂಗಿಸುವಿಕೆ ಇದರ ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

  ಅವರು ತಮ್ಮ ಮನೆಯಲ್ಲಿ ನಿರ್ಮಿಸಿದ ಮಳೆ ನೀರು ಇಂಗಿಸುವಿಕೆಯ ಪ್ರಾತ್ಯಕ್ಷಿತೆಯನ್ನು ತೋರಿಸಿ, ಅದರ ಸಂಪೂರ್ಣ ಮಾಹಿತಿಯನ್ನು ನೀಡಿದರು.

  ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನೀರಿನ ಅಭಾವವನ್ನು ತಡೆಗಟ್ಟುವ ಏಕೈಕ ಪರಿಹಾರ ನೀರು ಇಂಗಿಸುವಿಕೆ ಆಗಿದ್ದು, ಇದು ಮಳೆ ನೀರನ್ನು ಶುದ್ಧೀಕರಿಸಿ ನಮ್ಮ ಬಾವಿಗಳಿಗೆ ಬಿಡುವುದರ ಮೂಲಕ ನೀರಿನ ಸಂಗ್ರಹಣೆಯನ್ನು ಹೆಚ್ಚಿಸಬಹುದು. ಇದನ್ನು ಪ್ರತಿಯೊಬ್ಬರೂ ಕನಿಷ್ಠ ದರದಲ್ಲಿ ಮಾಡಲು ಸಾಧ್ಯವಿದ್ದು, ಮಾತ್ರವಲ್ಲದೆ ಸ್ಥಳೀಯ ಆಡಳಿತ ಸಂಸ್ಥೆಗಳು ಇದಕ್ಕೆ ಸಹಕಾರವನ್ನು ನೀಡಿದಾಗ ನೀರಿನ ಅಭಾವವನ್ನು ತಡೆಗಟ್ಟ ಬಹುದಾಗಿದೆ ಎಂದ ಅವರು,  ಇದನ್ನು ಅತಿ ಸುಲಭವಾಗಿ ನಮ್ಮ ಮನೆಯಲ್ಲಿಯೇ ನಾವೇ ನಿರ್ಮಿಸಬಹುದಾಗಿದೆ ಎಂದರು.

   ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇದರ ಉಪಾಧ್ಯಕ್ಷೆ, ಶಿಕ್ಷಕಿ ಅಸುಂತ ಡಿ’ಸೋಜರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಶ್ವನಾಥ್ ನಾಯಕ್ ರವರನ್ನು ಅಭಿನಂದಿಸಲಾಯಿತು.

  ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷ ಕೆ. ಆರ್ ಪಾಟ್ಕರ್, ಮೆಸ್ಕಾಂ ಉದ್ಯೋಗಿ  ಶ್ರೀಮತಿ ಸಂಧ್ಯಾ ವಿಶ್ವನಾಥ್, ಹಾಗೂ ಲಯನ್ಸ್ ಸಂಸ್ಥೆಯ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

  ಲಯನ್ಸ್ ಕ್ಲಬ್ ನ ಕೊಶಾಧಿಕಾರಿ ಲ. ಅನಿತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲ. ರೀನಾ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.