ಎರ್ಮಾಳು ತೆಂಕ ; ಟೆಂಪೋ ಕಂಟೈನರ್ ಡಿಕ್ಕಿ, ಟೆಂಪೋ ಚಾಲಕನಿಗೆ ಗಾಯ
ಜನಾರ್ಧನ ಹೋಟೆಲ್ ಎದುರು ಗುರುವಾರ ಬೆಳಿಗ್ಗೆ ನಡೆದ ಘಟನೆ
(Yermal) ಎರ್ಮಾಳು: ಎರ್ಮಾಳು ತೆಂಕ ರಾ. ಹೆ ೬೬ ಜನಾರ್ಧನ ಹೋಟೆಲ್ ಎದುರು ಟೆಂಪೋ ಮತ್ತು ಕಂಟೇನರ್ ಡಿಕ್ಕಿಯಲ್ಲಿ ಟೆಂಪೋ ಚಾಲಕ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಂಟೇನರಿಗೆ ಟೆಂಪೋ ಹಿಂದಿನಿಂದ ಗುದ್ದಿದೆ.
ಎರಡು ವಾಹನಗಳ ಅಪಘಾತದಲ್ಲಿ ಟೆಂಪೋ ಚಾಲಕ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಕಾರದಲ್ಲಿ ಸರಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಟೆಂಪೋ ಚಾಲಕನನ್ನು ಹೊರತೆಗೆಯಲಾಗಿದೆ.
ತೀವ್ರ ಗಾಯಗೊಂಡ ಚಾಲಕನನ್ನು ಎಸ್ಡಿಪಿಐ ಅಂಬುಲೆನ್ಸ್ ನಲ್ಲಿ ಚಾಲಕ ಹಮೀದ್ ಹಾಗೂ ಸಮಾಜ ಸೇವಕ ಜಲಾಲುದ್ದೀನ್ ರವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣದ ದಾಖಲಿಸಿದ್ದಾರೆ.

