• Home  
  • ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಕುರಿತು ಮೌಲ್ಯಮಾಪನ ಅಧ್ಯಯನ (Evaluation study on SC/ST Prevention of Atrocities Act in Belgaum)
- ಸಂಘ, ಸಂಸ್ಥೆಗಳು

ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಕುರಿತು ಮೌಲ್ಯಮಾಪನ ಅಧ್ಯಯನ (Evaluation study on SC/ST Prevention of Atrocities Act in Belgaum)

Share: ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಕುರಿತು ಮೌಲ್ಯಮಾಪನ ಅಧ್ಯಯನ   ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಂದ  ಸಂತ್ರಸ್ತರೊಂದಿಗೆ ಗುಂಪು ಚರ್ಚೆ ​(Belgaum) ಬೆಳಗಾವಿ: ನೈಋತ್ಯ ಆರ್ಟ್‌ ಮೀಡಿಯಾ ಸಂಸ್ಥೆ (ಬೆಂಗಳೂರು) ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾಗಿರುವ ಮೌಲ್ಯಮಾಪನ ಅಧ್ಯಯನದ ಅಂಗವಾಗಿ, ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರ ನೇತೃತ್ವದಲ್ಲಿ ಸಂತ್ರಸ್ತರೊಂದಿಗೆ ವಿಶೇಷ ಗುಂಪು ಚರ್ಚೆಯನ್ನು […]

​(Belgaum) ಬೆಳಗಾವಿ: ನೈಋತ್ಯ ಆರ್ಟ್‌ ಮೀಡಿಯಾ ಸಂಸ್ಥೆ (ಬೆಂಗಳೂರು) ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾಗಿರುವ ಮೌಲ್ಯಮಾಪನ ಅಧ್ಯಯನದ ಅಂಗವಾಗಿ, ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರ ನೇತೃತ್ವದಲ್ಲಿ ಸಂತ್ರಸ್ತರೊಂದಿಗೆ ವಿಶೇಷ ಗುಂಪು ಚರ್ಚೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

​  ಈ ಸಭೆಯಲ್ಲಿ ಕಾಯಿದೆಯ ಪರಿಣಾಮಕಾರಿತ್ವ, ಸಂತ್ರಸ್ತರಿಗೆ ಲಭಿಸುತ್ತಿರುವ ಸೌಲಭ್ಯಗಳು ಹಾಗೂ ಕಾನೂನು ನೆರವಿನ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

​  ಗುಂಪು ಚರ್ಚೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಚನ್ನಯ್ಯನವರ್, ಪತ್ರಾಂಕಿತ ವ್ಯವಸ್ಥಾಪಕರಾದ   ಎಂ.ಬಿ. ಹೊಸಮನಿ, ಡಿಸಿ ಐ ಆರ್‌, ಪೊಲೀಸ್ ಇಲಾಖಾಧಿಕಾರಿ ಶ್ರೀಮತಿ ರಂಜಿತ ಗಿಲ್ ಹಾಗೂ ನ್ಯಾಯವಾದಿ ಎ.ಡಿ. ಕೋಳಿ ಅವರು ಭಾಗವಹಿಸಿ, ಕಾಯಿದೆಯ ವಿವಿಧ ಆಯಾಮಗಳ ಕುರಿತು ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು.

​ ಕಾರ್ಯಕ್ರಮದಲ್ಲಿ ನೈಋತ್ಯ ಆರ್ಟ್‌ ಮೀಡಿಯಾ ಸಂಸ್ಥೆಯ ಬೆಳಗಾವಿ ಪ್ರತಿನಿಧಿ ವೈಶಾಲಿ (ಗೀತಾ) ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

 ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ  ರಾಜಶೇಖರ್ ಲಟ್ಟಿ, ಮೋಹನ್ ದುಗಾಡೆ, ಪ್ರಜ್ವಲ್ ಕೋಲಕರ ಹಾಗೂ ದೌರ್ಜನ್ಯ ಕಾಯಿದೆಯ ಸಂತ್ರಸ್ತರು ಉಪಸ್ಥಿತರಿದ್ದು, ಸಭೆಯ ಯಶಸ್ಸಿಗೆ ಸಹಕರಿಸಿದರು.

 ವರದಿ : ಮಹೇಶ್ ಶರ್ಮಾ, ಬೆಳಗಾವಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.