• Home  
  • ಬೆಳಗಾವಿ : ಕರಡಿಗುದ್ದಿಯಲ್ಲಿ 2.75 ಕೋಟಿ ರೂ.  ವೆಚ್ಚದ  ಕಾಂಕ್ರೀಟ್ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ (Belgaum: Bhoomi Puja for the construction of concrete road and drains worth Rs. 2.75 crore in Karadiguddi)
- ಜಿಲ್ಲಾಡಳಿತ - ಪ್ರಚಲಿತ - ವಿಷೇಶ ಸುದ್ದಿ

ಬೆಳಗಾವಿ : ಕರಡಿಗುದ್ದಿಯಲ್ಲಿ 2.75 ಕೋಟಿ ರೂ.  ವೆಚ್ಚದ  ಕಾಂಕ್ರೀಟ್ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ (Belgaum: Bhoomi Puja for the construction of concrete road and drains worth Rs. 2.75 crore in Karadiguddi)

Share: ಬೆಳಗಾವಿ : ಕರಡಿಗುದ್ದಿಯಲ್ಲಿ 2.75 ಕೋಟಿ ರೂ.  ವೆಚ್ಚದ  ಕಾಂಕ್ರೀಟ್ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ಭೂಮಿ ಪೂಜೆ ನೆರವೇರಿಸಿದ ಬೆಳಗಾವಿ ಗ್ರಾಮೀಣ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ (Belgaum) ಬೆಳಗಾವಿ : ಕರಡಿಗುದ್ದಿ ಗ್ರಾಮದಲ್ಲಿ ಸುಮಾರು 2.75 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿಗಳ ನಿರ್ಮಾಣದ ಕಾಮಗಾರಿಗೆ ‌ ಬೆಳಗಾವಿ ಗ್ರಾಮೀಣ ಶಾಸಕಿ,ಮಾಜಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.   […]

(Belgaum) ಬೆಳಗಾವಿ : ಕರಡಿಗುದ್ದಿ ಗ್ರಾಮದಲ್ಲಿ ಸುಮಾರು 2.75 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿಗಳ ನಿರ್ಮಾಣದ ಕಾಮಗಾರಿಗೆ ‌ ಬೆಳಗಾವಿ ಗ್ರಾಮೀಣ ಶಾಸಕಿ,ಮಾಜಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

  ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಗ್ರಾಮದ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರಮುಖ ಹೆಜ್ಜೆಯಾಗಿದ್ದು, ಗುಣಮಟ್ಟದ ಕಾಂಕ್ರೀಟ್ ರಸ್ತೆ ಮತ್ತು ವ್ಯವಸ್ಥಿತ ಚರಂಡಿ ನಿರ್ಮಾಣದಿಂದ ಗ್ರಾಮಸ್ಥರ ದೀರ್ಘಕಾಲದ ಸಂಚಾರ ಹಾಗೂ ನೈರ್ಮಲ್ಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಯೇ ಆದ್ಯತೆಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಈ ಹೇಳಿದರು. ತಿಳಿಸಲಾಯಿತು.

  ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಯುವರಾಜಣ್ಣ ಕದಂ, ನಾಗೇಶ್ ದೇಸಾಯಿ, ಸಿದ್ದಪ್ಪ ಚೌಗುಲಾ, ಸದಾಶಿವ ಮೂಖನವರ, ಉಳವಪ್ಪ ಮಲನ್ನವರ, ಬಸವರಾಜ ರಾಚನ್ನವರ, ಮಹಾಂತೇಶ್ ರಾಜನ್ನವರ, ಹಾಲಪ್ಪ ನೇಸರಗಿ, ಅಶೋಕ ಮೂಖನವರ, ಗಿರಿಜಾ ಪಾಟೀಲ ಅಡಿವೆಪ್ಪ ಬಸನಗೌಡ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.