ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ನಾಲ್ಕನೇ ದಿನದ ಗಣೇಶೋತ್ಸವಕ್ಕೆ ತೆರೆ
ಎರ್ಮಾಳು ಬಡಾ ಸಮುದ್ರದಲ್ಲಿ ಗಣೇಶನ ಮೃಣ್ಮಯ ಮೂರ್ತಿಯ ಜಲಸ್ಥಂಭನ
(Uchila) ಉಚ್ಚಿಲ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 39ನೇ ವರ್ಷದ ಗಣೇಶೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಸಮಾಪನಗೊಂಡಿದೆ.
ಕಳೆದ ಸೋಮವಾರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ತೆರೆದ ಸಭಾಂಗಣದಲ್ಲಿ ಶ್ರೀ ಗಣಪತಿಯ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿ̧ದ್ದು ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಪೂಜಾ ವಿಧಿ ವಿಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಗುರುವಾರ ಸಂಜೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರು ವಿಸರ್ಜನಾ ಪೂಜೆ ಸಲ್ಲಿಸಿದ ಬಳಿಕ ಗಣಪತಿಯ ಮೆರವಣಿಗೆಗೆ ಚಾಲನೆ ದೊರೆಯಿತು.
ಮೆರವಣಿಗೆಯಲ್ಲಿ ಚಂಡೆ, ವಾದ್ಯ, ಕುಣಿತ ಭಜನೆ ಕೀಲು ಕುದುರೆ, ಹುಲಿ ವೇಷ ಸಹಿತ 10 ಹಲವು ಟ್ಯಾಬ್ಲೋಗಳು ಒಳಗೊಂಡಿತ್ತು.
ವಿಸರ್ಜನಾ ಮೆರವಣಿಗೆಯು ಉಚ್ಚಿಲ ಶ್ರೀ ಮಹಾಲಕ್ಷ್ಮೀ ತೆರೆದ ಸಭಾಭವನದಿಂದ ಮೂಳೂರುವರೆಗೆ ಸಾಗಿ ಅಲ್ಲಿಂದ ಎರ್ಮಾಳಿಗೆ ತೆರಳಿ, ಅಲ್ಲಿಂದ ಎರ್ಮಾಳು ಬಡಾ ಸಮುದ್ರ ದಲ್ಲಿ ಗಣೇಶನ ಮೃಣ್ಮಯ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು.
ಈ ಸಂದರ್ಭ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಎರ್ಮಾಳು, ಕಾರ್ಯದರ್ಶಿ ಗುರುರಾಜ್ ಉಚ್ಚಿಲ, ಕೋಶಾಧಿಕಾರಿ ವಿಷ್ಣುಮೂರ್ತಿ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

