• Home  
  • ಉಡುಪಿ ಉಚ್ಚಿಲ ದಸರಾ – 2026: ಅ. 12ರಂದು ಸಿಎಂ ಡಿ. ಕೆ. ಶಿವಕುಮಾರ್ ಭೇಟಿ : ಡಾ. ಜಿ. ಶಂಕರ್ (Udupi Uchila Dussehra – 2026: A. On 12th CM D. K. Shivakumar visit: Dr. G. Shankar)
- fastival - ಧಾರ್ಮಿಕ - ರಾಜಕೀಯ - ಸನ್ಮಾನ, ಅಭಿನಂದನೆ - ಸೌಹಾರ್ಧ

ಉಡುಪಿ ಉಚ್ಚಿಲ ದಸರಾ – 2026: ಅ. 12ರಂದು ಸಿಎಂ ಡಿ. ಕೆ. ಶಿವಕುಮಾರ್ ಭೇಟಿ : ಡಾ. ಜಿ. ಶಂಕರ್ (Udupi Uchila Dussehra – 2026: A. On 12th CM D. K. Shivakumar visit: Dr. G. Shankar)

Share: ಉಡುಪಿ ಉಚ್ಚಿಲ ದಸರಾ – 2026: ಅ. 12ರಂದು ಸಿಎಂ ಡಿ. ಕೆ. ಶಿವಕುಮಾರ್ ಭೇಟಿ: ಡಾ. ಜಿ. ಶಂಕರ್ ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ ಡಿಕೆಶಿ (Uchila) ಉಚ್ಚಿಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಅ. 12ರಂದು ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರ ಉಚ್ಚಿಲಕ್ಕೆ ಆಗಮಿಸಿ, ಉಡುಪಿ ಉಚ್ಚಿಲ ದಸರಾ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ, ಉಡುಪಿ ಉಚ್ಚಿಲ ದಸರಾದ ರೂವಾರಿ ನಾಡೋಜ ಡಾ. ಶಂಕರ್ […]

(Uchila) ಉಚ್ಚಿಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಅ. 12ರಂದು ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರ ಉಚ್ಚಿಲಕ್ಕೆ ಆಗಮಿಸಿ, ಉಡುಪಿ ಉಚ್ಚಿಲ ದಸರಾ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ, ಉಡುಪಿ ಉಚ್ಚಿಲ ದಸರಾದ ರೂವಾರಿ ನಾಡೋಜ ಡಾ. ಶಂಕರ್ ಹೇಳಿದ್ದಾರೆ.

ಸಿಎಂ ಡಿಕೆ ಶಿವಕುಮಾರ್‌ಅವರು, ಅ.12 ರಂದು ಮಧ್ಯಾಹ್ನ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಮಹಿಳಾ ದಸರಾ ಉದ್ಘಾಟಿಸುವರು. ಈ ಸಂದರ್ಭ ಮುಖ್ಯಮಂತ್ರಿಯವರನ್ನು ಅಭಿನಂದಿಸಲಾಗುವುದು. ಅವಿಭಜಿತ ಜಿಲ್ಲೆಯ ಬಂದರು ಹಾಗೂ ಮಹಿಳಾ ಮೀನುಗಾರರ ಸಮಸ್ಯೆಗಳ ಕುರಿತು ಮನವಿ ನೀಡಲಾಗುವುದು.

 ದಸರಾ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಿದ್ದಾರೆ. ಇದೇ ವೇಳೆ ದಸರಾ ಅಂಗವಾಗಿ ಆಯೋಜಿಸಿರುವ ವಸ್ತುಪ್ರದರ್ಶನಕ್ಕೂ ಭೇಟಿ ನೀಡಲಿದ್ದಾರೆ ಎಂದೂ ಡಾ. ಜಿ ಶಂಕರ್‌ ಹೇಳಿದ್ದಾರೆ.

 ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್‌ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.