• Home  
  • ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಬದರಿ ಯಾತ್ರೆ ಸಂಪನ್ನ (Karamballi Zone Brahmin Committee: Badari Yatra complete)
- ಧಾರ್ಮಿಕ

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಬದರಿ ಯಾತ್ರೆ ಸಂಪನ್ನ (Karamballi Zone Brahmin Committee: Badari Yatra complete)

Share: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಬದರಿ ಯಾತ್ರೆ ಸಂಪನ್ನ ಎಂಟು ದಿನಗಳ ಕಾಲ ಹರಿದ್ವಾರ, ಋಷಿಕೇಶ ಹಾಗೂ ಬದರಿ ಕ್ಷೇತ್ರಗಳ ಯಾತ್ರೆ (Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ವತಿಯಿಂದ  ಎಂಟು ದಿನಗಳ ಕಾಲ ಹರಿದ್ವಾರ, ಋಷಿಕೇಶ ಹಾಗೂ ಬದರಿ ಕ್ಷೇತ್ರಗಳ ಯಾತ್ರೆ ಸಂಪನ್ನಗೊಂಡಿತು.  ತೀರ್ಥ ಯಾತ್ರೆಯು ಸಮಿತಿಯ ಕಾರ್ಯದರ್ಶಿ  ನಾಗರಾಜ ಭಟ್ ಮತ್ತು ಲಕ್ಷ್ಮಿ ನಾರಾಯಣಚಾರ್ ಗುಂಡಿಬೈಲು ಇವರ ನೇತೃತ್ವದಲ್ಲಿ ಯಾತ್ರೆ ಆಯೋಜಿಸಲಾಗಿತ್ತು.   ಸಮಿತಿಯ ಹಿರಿಯ ಸದಸ್ಯರಾದ ಗೋವಿಂದ ಐತಾಳ್, […]

(Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ವತಿಯಿಂದ  ಎಂಟು ದಿನಗಳ ಕಾಲ ಹರಿದ್ವಾರ, ಋಷಿಕೇಶ ಹಾಗೂ ಬದರಿ ಕ್ಷೇತ್ರಗಳ ಯಾತ್ರೆ ಸಂಪನ್ನಗೊಂಡಿತು.

 ತೀರ್ಥ ಯಾತ್ರೆಯು ಸಮಿತಿಯ ಕಾರ್ಯದರ್ಶಿ  ನಾಗರಾಜ ಭಟ್ ಮತ್ತು ಲಕ್ಷ್ಮಿ ನಾರಾಯಣಚಾರ್ ಗುಂಡಿಬೈಲು ಇವರ ನೇತೃತ್ವದಲ್ಲಿ ಯಾತ್ರೆ ಆಯೋಜಿಸಲಾಗಿತ್ತು.

  ಸಮಿತಿಯ ಹಿರಿಯ ಸದಸ್ಯರಾದ ಗೋವಿಂದ ಐತಾಳ್, ನಾಗರಾಜ ಐತಾಳ್, ಶ್ರೀಪತಿ ಭಟ್, ಜಯರಾಮ್ ರಾವ್, ತುಳಸಿದಾಸ್ ಗುರ್ಜಾರ್, ಲಕ್ಷ್ಮೀಶ ಆಚಾರ್, ವೇದವ್ಯಾಸ ಆಚಾರ್ಯ, ವಾಣಿ ಶೃಂಗೇಶ್ವರ, ರಂಗನಾಥ ಸರಳಾಯ, ವಿಠ್ಠಲದಾಸ್ ಭಟ್, ಚೆನ್ನಕೇಶವ ಕುಟುಂಬದವರು ಹಾಗೂ ಇತರರು ಸೇರಿ 28 ಮಂದಿ ವಿಪ್ರರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

  ಇದೇ ಸಂದರ್ಭದಲ್ಲಿ ಕರಂಬಳ್ಳಿ ಶ್ರೀಪತಿ ಭಟ್ ಮತ್ತು ಫಣಿಯಾಡಿ ರಾಘವೇಂದ್ರ ಭಟ್ ಅವರ ಸಹಕಾರದೊಂದಿಗೆ ಹರಿದ್ವಾರದಲ್ಲಿ ಯೋಗ ಗುರು ರಾಮದೇವ್ ಅವರ ಪತಂಜಲಿ ಯೋಗಪೀಠವನ್ನು ಸಂದರ್ಶಿಸಲಾಯಿತು.

  ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣ ರಾಜ್ ಭಟ್ ಮಾತನಾಡಿ,  ಉಡುಪಿ ಜಿಲ್ಲೆಯ ಬ್ರಾಹ್ಮಣ ವಲಯಗಳಲ್ಲಿ  ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯು 2ನೇ  ಬಾರಿ ಅತಿ ದೀರ್ಘ ತೀರ್ಥಯಾತ್ರೆಯನ್ನು ಆಯೋಜಿಸಿದ್ದು ನಮಗೆ ಹೆಮ್ಮೆ ತಂದಿದೆ. ಈ ಯಾತ್ರೆ ಯಶಸ್ವಿಯಾಗುವುದರಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.