• Home  
  • ನಮ್ಮ ಕರ್ನಾಟಕ ಸೇನೆ : ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ (Namma Karnataka Sene: Sujay Poojari entrusted with the responsibility of overseeing four districts.)
- ಸಂಘ, ಸಂಸ್ಥೆಗಳು

ನಮ್ಮ ಕರ್ನಾಟಕ ಸೇನೆ : ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ (Namma Karnataka Sene: Sujay Poojari entrusted with the responsibility of overseeing four districts.)

Share: ನಮ್ಮ ಕರ್ನಾಟಕ ಸೇನೆ : ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ  ಬೆಂಗಳೂರಿನ ಸ್ಯಾಂಕ್ಟಮ್ ಹೋಟೆಲ್‌ನಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ನಿರ್ಧಾರ (Bengaluru) ಬೆಂಗಳೂರು : ನಮ್ಮ ಕರ್ನಾಟಕ ಸೇನೆಯ ರಾಜ್ಯಮಟ್ಟದ ಸಭೆಯು ಕಳೆದ ಭಾನುವಾರ ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸ್ಯಾಂಕ್ಟಮ್ ಹೋಟೆಲ್‌ನಲ್ಲಿ ನಡೆಯಿತು.   ಈ ಸಭೆಯು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಜರುಗಿತು.    ರಾಜ್ಯಮಟ್ಟದ ಸಭೆಯಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು, ವಿವಿಧ […]

(Bengaluru) ಬೆಂಗಳೂರು : ನಮ್ಮ ಕರ್ನಾಟಕ ಸೇನೆಯ ರಾಜ್ಯಮಟ್ಟದ ಸಭೆಯು ಕಳೆದ ಭಾನುವಾರ ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸ್ಯಾಂಕ್ಟಮ್ ಹೋಟೆಲ್‌ನಲ್ಲಿ ನಡೆಯಿತು.

  ಈ ಸಭೆಯು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಜರುಗಿತು.

   ರಾಜ್ಯಮಟ್ಟದ ಸಭೆಯಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ, ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರಿಗೆ ಹೆಚ್ಚುವರಿಯಾಗಿ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿ ಆಯ್ಕೆ ಮಾಡಲಾಯಿತು.

  ಸುಜಯ್ ಪೂಜಾರಿ ಅವರು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಕಾರವಾರ ಜಿಲ್ಲೆಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

   ಸಂಘಟನೆಯ ಬಲವರ್ಧನೆ, ಹೊಸ ಪದಾಧಿಕಾರಿಗಳ ನೇಮಕ, ಸದಸ್ಯತ್ವ ಅಭಿಯಾನ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಯ ನಿಟ್ಟಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.

  ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಟ್ಟ   ರಾಜ್ಯಾಧ್ಯಕ್ಷರಾದ ಎಂ. ಬಸವರಾಜ್ ಪಡುಕೋಟೆಯವರಿಗೆ ಸುಜಯ್ ಪೂಜಾರಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.