• Home  
  • ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ (Ravi Katapadi extends a helping hand for the treatment of ailing children.)
- ಸನ್ಮಾನ, ಅಭಿನಂದನೆ - ಸಹಾಯ ಹಸ್ತ

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ (Ravi Katapadi extends a helping hand for the treatment of ailing children.)

Share: ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ ರವಿ ಕಟಪಾಡಿಯವರಿಂದ ಸಹಾಯ ಪಡೆದವರು ಅವರನ್ನು ದೇವರಂತೆ ಕಾಣುತ್ತಾರೆ : ಉಡುಪಿ ಎಸ್ಪಿ ಹರಿರಾಂ (Katapadi) ಕಟಪಾಡಿ, ಅ.30 :  ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನಲ್ಲಿ ರವಿ ಕಟಪಾಡಿಯವರು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮರ್ ಮೈಡ್ (ಮತ್ಸ್ಯ ಕನ್ಯೆ) ವೇಷಧರಿಸಿ ಸಂಗ್ರಹಿಸಿದ ಸುಮಾರು 42 ಲಕ್ಷ ರೂ. ಮೊತ್ತವನ್ನು ಅನಾರೋಗ್ಯ ಪೀಡಿತ 14 ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ […]

(Katapadi) ಕಟಪಾಡಿ, ಅ.30 :  ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನಲ್ಲಿ ರವಿ ಕಟಪಾಡಿಯವರು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮರ್ ಮೈಡ್ (ಮತ್ಸ್ಯ ಕನ್ಯೆ) ವೇಷಧರಿಸಿ ಸಂಗ್ರಹಿಸಿದ ಸುಮಾರು 42 ಲಕ್ಷ ರೂ. ಮೊತ್ತವನ್ನು ಅನಾರೋಗ್ಯ ಪೀಡಿತ 14 ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಉದ್ಘಾಟಿಸಿದರು.

ಅವರು ಮಾತನಾಡಿ, ರವಿ ಕಟಪಾಡಿಯವರು ಮತ್ತು ಅವರ ತಂಡ ಮಾನವೀಯತೆಯ ಮೂಲಕ ಅನಾರೋಗ್ಯ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯ ಮಾಡುವ ಮೂಲಕ ಹೃದಯ ಶ್ರೀಮಂತ ಅನ್ನಿಸಿಕೊಂಡಿದ್ದಾರೆ.ರವಿ ಕಟಪಾಡಿಯವರಿಂದ ಸಹಾಯ ಪಡೆದವರು ಅವರನ್ನು ದೇವರಂತೆ ಕಾಣುತ್ತಾರೆ ಎಂದು ಹೇಳಿದ ಎಸ್ಪಿ ಹರಿರಾಂ ಶಂಕರ್‌ ತಂಡದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

 ರವಿ ಕಟಪಾಡಿ ಮಾತನಾಡಿ, ಕಳೆದ 10 ವರ್ಷದಲ್ಲಿ ನಮ್ಮ ತಂಡದ ಸಹಕಾರದಲ್ಲಿ ಸಂಗ್ರಹಿಸಿದ ಒಟ್ಟು 1 ಕೋಟಿ 85 ಲಕ್ಷ ರೂ. ಮೊತ್ತವನ್ನು 204 ಅನಾರೋಗ್ಯ ಪೀಡಿತ ಪುಟಾಣಿ ಮಕ್ಕಳಿಗೆ ಹಸ್ತಾಂತರಿಸಲಾಗಿತ್ತು. ಈ ಬಾರಿಯ 42 ಲಕ್ಷ ರೂ. ಸೇರಿದಂತೆ ಇದುವರೆಗೆ ಅಷ್ಟಮಿ ವೇಷಧಾರಿಯಾಗಿ 218 ಮಂದಿ ಅನಾರೋಗ್ಯ ಪೀಡಿತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಒಟ್ಟು 2 ಕೋಟಿ ರೂ ಸಹಾಯಧನ ನೀಡಿದಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ರವಿ ಕಟಪಾಡಿಯವರಿಗೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

 ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ, ಕಾಪು ತಾಲೂಕು ಕಾರ್ಯನಿರ್ಹಣಾಧಿಕಾರಿ ವಿಜಯಾ, ಶ್ರೀ ಕ್ಷೇತ್ರ ಪೇಟೆಬೆಟ್ಟು ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಗುರಿಕಾರ ಹರಿಶ್ಚಂದ್ರ ಪಿಲಾರು, ಉಡುಪಿ ಪ್ಲೇ ಝೋನ್ ಮಾಲಕ ರಾಜೇಶ್ ಮಾಬಿಯನ್, ಮಾರ್ಗದರ್ಶಕ ಮಹೇಶ್ ಶೆಣೈ, ಜಿತೇಶ್ ಮಿಜಾರ್ ಶುಭ ಹಾರೈಸಿದರು.

 ಗಣೇಶ್ ಕರ್ಕೇರ ಮಲ್ಪೆ, ರಮೇಶ್ ಡಿ ಮೆಂಡನ್ ಕೊಡವೂರು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ರಝಿಯಲ್ಲಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.