• Home  
  • ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ : ದೀಪಾವಳಿಗೆ ಜೀವನ ಜ್ಞಾನದ ಕೊಡುಗೆ (A Beacon Illuminating Tulu Culture: A Gift of Life Wisdom for Deepavali)
- ಸಾಂಸ್ಕೃತಿಕ

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ : ದೀಪಾವಳಿಗೆ ಜೀವನ ಜ್ಞಾನದ ಕೊಡುಗೆ (A Beacon Illuminating Tulu Culture: A Gift of Life Wisdom for Deepavali)

Share: ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ : ದೀಪಾವಳಿಗೆ ಜೀವನ ಜ್ಞಾನದ ಕೊಡುಗೆ   ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​ (Parkala) ಪರ್ಕಳ: ಕ್ರೀಡಾ ಕ್ಷೇತ್ರದೊಂದಿಗೆ ಸಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್​ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ.   ಬದುಕಿನ ಅಂಧಕಾರ ಕಳೆಯುವ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಏನಾದರೊಂದು ವಿಶೇಷ ಜ್ಞಾನ ನೀಡುವುದು ಈ ಸಂಘಟನೆಯ […]

(Parkala) ಪರ್ಕಳ: ಕ್ರೀಡಾ ಕ್ಷೇತ್ರದೊಂದಿಗೆ ಸಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್​ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ.

  ಬದುಕಿನ ಅಂಧಕಾರ ಕಳೆಯುವ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಏನಾದರೊಂದು ವಿಶೇಷ ಜ್ಞಾನ ನೀಡುವುದು ಈ ಸಂಘಟನೆಯ ವಿಶಿಷ್ಟತೆಯಾಗಿದೆ.

  ತುಳು ಭಾಷೆಗೆ ಮಾನ್ಯತೆ

  ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ತುಳು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದೆ. ಹೀಗಾಗಿ ತುಳುನಾಡಿನ ವಿಶಿಷ್ಟತೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನ ಬಿಂಬಿಸುವ ಬೃಹತ್​ ಆಕಾಶದೀಪ ಸಿದ್ಧಪಡಿಸಲಾಗಿದೆ. ಸಹಕಾರ ಭಾರತಿ ಹಾಗೂ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ದೇವಸ್ಥಾನದ ಸಹಕಾರದಲ್ಲಿ ದೇಗುಲದ ಮುಂಭಾಗದ ರಸ್ತೆಯಲ್ಲಿ ಬೃಹತ್​ ಆಕಾಶದೀಪ ಅಳವಡಿಸಲಾಗಿದೆ.

  ಅಷ್ಟಾಕೃತಿಯ ಗೂಡುದೀಪ

  13 ಅಡಿ  ಎತ್ತರ, 6 ಅಡಿ​ ಅಗಲದ ಅಷ್ಟಾಕೃತಿಯ ಆಕಾಶದೀಪದಲ್ಲಿ ತುಳುನಾಡಿನ ಆಚರಣೆಯ ಚಿತ್ರ ಅಳವಡಿಸಲಾಗಿದೆ. ಕೋಲ, ಯಕ್ಷಗಾನ, ಕಂಬಳ, ಆಟಿ ಕಳಿಂಜ, ಕೋಳಿ ಅಂಕ, ಹುಲಿ ಕುಣಿತ, ಭತ್ತಕೃಷಿ, ಡೋಲು, ಗರಡಿ ನೇಮೋತ್ಸವ ಹೀಗೆ ತುಳುನಾಡಿನ ವಿವಿಧ ಜನಪದೀಯ ಸಂಸ್ಕೃತಿಯನ್ನು ಬಿಂಬಿಸಲಾಗಿದೆ.

  ಮುಂಬರುವ ಚಂಪಾ ಷಷ್ಠಿಯವರೆಗೂ ಈ ಆಕಾಶದೀಪವು ತುಳುನಾಡಿನ ಸಂಸ್ಕೃತಿ, ವೈಭವವನ್ನು ಸಾರಲಿದೆ.

  ಕಳೆದ ವರ್ಷ ‘ಆಪರೇಷನ್​ ಸಿಂಧೂರ’ ಆಕಾಶದೀಪದ ಮೂಲಕ ಭಾರತಾಂಬೆಯ ‘ವಿಜಯದ ಸ್ಮರಣೆ’ ಮಾಡಿದ್ದೆವು. ಈ ಬಾರಿ ತುಳುವಿಗೆ 2ನೇ ಭಾಷೆಯ ಸ್ಥಾನಮಾನ ಲಭಿಸಿದ್ದರಿಂದ ತುಳುನಾಡಿನ ಸಂಸ್ಕೃತಿ, ಪರಶುರಾಮನ ಶಕ್ತಿ-ಭಕ್ತಿಯ ಜ್ಞಾನ ಸ್ಮರಿಸುವಂತೆ ಮಾಡಲಾಗಿದೆ ಎಂದು ಪರ್ಕಳದ ವಾಲಿಬಾಲ್​ ಫ್ರೆಂಡ್ಸ್​ ತಂಡ ತಿಳಿಸಿದೆ.

 ಪರಶುರಾಮನ ‘ತ್ರಿ–ಡಿ‘ಸ್ಮರಣೆ

  ಆಕಾಶದೀಪವು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ತುಳುನಾಡಿನ ಸೃಷ್ಟಿಕರ್ತನೂ ಆದ ಮಹಾವಿಷ್ಣುವಿನ ಅವತಾರ ಪರಶುರಾಮನ ಸ್ಮರಣೆಯನ್ನೂ ಮಾಡಲಾಗಿದೆ. ಭೂ ಮಂಡಲದಾದ್ಯಂತ 21 ಬಾರಿ ಪ್ರದಕ್ಷಿಣೆ ಹಾಕಿ ಕ್ಷತ್ರಿಯರನ್ನೆಲ್ಲ ಸಂಹರಿಸಿದ ಪರಶುರಾಮನು ದೇಶದ ಪಶ್ಚಿಮ ಭಾಗದತ್ತ (ಈಗಿನ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯ ಬಾಗ್ಲಾನ್​ ತಾಲೂಕಿನಲ್ಲಿರುವ ಸಲ್ಹೇರ್​ ಕೋಟೆ ಪ್ರದೇಶ) ಬಂದು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಸಮುದ್ರದ ನೀರು ಹಿಂದಕ್ಕೆ ಹೋಗುವಂತೆ ಮಾಡಿ ಇಂದಿನ ಕರಾವಳಿ ಪ್ರದೇಶ ನಿರ್ಮಿಸಿದನೆಂದು ಪುರಾಣ ಕಥೆಯಿದೆ. ಬಳಿಕ ಕರಾವಳಿಯಲ್ಲಿ ವಿವಿಧ ಸಂಸ್ಕೃತಿ ಸೃಷ್ಟಿಯಾಗಿದ್ದು, ತುಳು ಸಂಸ್ಕೃತಿಯೂ ಪ್ರಮುಖವಾಗಿದೆ. ಅದರ ಸ್ಮರಣೆಗಾಗಿ ಪರಶುವನ್ನು ಎಸೆಯುತ್ತಿರುವ ಪರಶುರಾಮನನ್ನು ‘ತ್ರಿ-ಡಿ’ ಚಿತ್ರದ ಮೂಲಕ ಅನಾವರಣಗೊಳಿಸಿ ಜನರ ನೆಲೆಯ ಮಾಹಿತಿ ನೀಡಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.