• Home  
  • ಮಣಿಪಾಲ : ಕೆಎಂಸಿಯಲ್ಲಿ ನೂತನ ಕಾರ್ನಿಯಾ ಇಮೇಜಿಂಗ್, ಕ್ರಾಸ್-ಲಿಂಕಿಂಗ್ ಸೌಲಭ್ಯ ಆರಂಭ (Manipal: New corneal imaging and cross-linking facilities launched at KMC)
- ವ್ಯವಹಾರ

ಮಣಿಪಾಲ : ಕೆಎಂಸಿಯಲ್ಲಿ ನೂತನ ಕಾರ್ನಿಯಾ ಇಮೇಜಿಂಗ್, ಕ್ರಾಸ್-ಲಿಂಕಿಂಗ್ ಸೌಲಭ್ಯ ಆರಂಭ (Manipal: New corneal imaging and cross-linking facilities launched at KMC)

Share: ಮಣಿಪಾಲ : ಕೆಎಂಸಿಯಲ್ಲಿ ನೂತನ ಕಾರ್ನಿಯಾ ಇಮೇಜಿಂಗ್, ಕ್ರಾಸ್–ಲಿಂಕಿಂಗ್ ಸೌಲಭ್ಯ ಆರಂಭ ಸೌಲಭ್ಯ ಉದ್ಘಾಟಿಸಿದ ಮಾಹೆ ಬೋಧನಾ ಆಸ್ಪತ್ರೆಗಳ ಸಿಇಓ ಡಾ. ಸುಧಾಕರ್   (Manipala) ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ನೇತ್ರ ಶಾಸ್ತ್ರ ವಿಭಾಗದಲ್ಲಿ ಕೆರಟೋಕೋನಸ್ ಕಾಯಿಲೆಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಎರಡು ನೂತನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.    ಕೆರಟೋಕೋನಸ್, ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದಲ್ಲಿ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದಾದ ಕಣ್ಣಿನ ಸಮಸ್ಯೆಯಾಗಿದೆ. ANTERION® ಕಾರ್ನಿಯಲ್ ಟೊಮೊಗ್ರಫಿ ಮತ್ತು ಟೊಪೊಗ್ರಫಿ ಉಪಕರಣ ಹಾಗೂ […]

  (Manipala) ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ನೇತ್ರ ಶಾಸ್ತ್ರ ವಿಭಾಗದಲ್ಲಿ ಕೆರಟೋಕೋನಸ್ ಕಾಯಿಲೆಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಎರಡು ನೂತನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

   ಕೆರಟೋಕೋನಸ್, ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದಲ್ಲಿ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದಾದ ಕಣ್ಣಿನ ಸಮಸ್ಯೆಯಾಗಿದೆ. ANTERION® ಕಾರ್ನಿಯಲ್ ಟೊಮೊಗ್ರಫಿ ಮತ್ತು ಟೊಪೊಗ್ರಫಿ ಉಪಕರಣ ಹಾಗೂ CXL UVR ರ್ಯಾಪಿಡ್ ಕೊಲಾಜೆನ್ ಕ್ರಾಸ್-ಲಿಂಕಿಂಗ್ ವ್ಯವಸ್ಥೆ ಗಳನ್ನು ಉದ್ಘಾಟಿಸಲಾಯಿತು.

 ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿಯವರು ಈ ಸೌಲಭ್ಯವನ್ನು ಉದ್ಘಾಟಿಸಿದರು.

  ಈ ಕಾಯಿಲೆಯ ಬಗ್ಗೆ ಹಾಗೂ ಶೀಘ್ರ ಪತ್ತೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 10ರಂದು ವಿಶ್ವ ಕೆರಟೋಕೋನಸ್ ದಿನವನ್ನು ಆಚರಿಸಲಾಗುತ್ತದೆ.

  ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್, ಕಾರ್ನಿಯಾ ತಜ್ಞೆ ಡಾ. ದೀಕ್ಷಿತಾ ವಿ., ವಿಭಾಗದ ಬೋಧಕ ಸಿಬ್ಬಂದಿ, ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.