ಬ್ರಹ್ಮಾವರ: ರೋಟರಿ ಕ್ಲಬ್ ಬ್ರಹ್ಮಾವರ ಮತ್ತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಇರುವಕ್ಕಿ ಶಿವಮೊಗ್ಗ , ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ನಾನಾ ಸಂಘಟನೆಗಳ ಸಹಭಾಗಿತ್ವದಲ್ಲಿ ಜೂನ್ 10 ಮತ್ತು 11 ರಂದು ಎಸ್ ಎಂ ಎಸ್ ಸಮುದಾಯ ಭವನದಲ್ಲಿ ಹಣ್ಣು ಮೇಳ 2023 ಜರುಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಧನಂಜಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೌಲ್ಯವರ್ಧಕ ಹಣ್ಣು ಜನರಿಂದ ನಿರ್ಲಕ್ಷಿತವಾದ ಹಲಸು ಹಣ್ಣಿಗೆ ವಿಶೇಷ ಮಹತ್ವ ನೀಡಲಿರುವ ಮೇಳದಲ್ಲಿ ಬಯಲು ಸೀಮೆಯ ಕೆಂಪು ಹಲಸು ಮತ್ತು ನಾನಾ ಬಗೆಯ ಹಲಸು ಖಾದ್ಯಗಳು ಮೇಳದಲ್ಲಿ ಇರಲಿದ್ದು, ಮಾವಿನ ಹಣ್ಣು, ಹಲಸಿನ ನಾನಾ ತಳಿಗಳ ಗಿಡಗಳು ಇನ್ನಿತರ ಮೇಳದಲ್ಲಿ ಇರಲಿದೆ ಎಂದರು.
ಹಲಸಿನ ಮೇಳದಲ್ಲಿ 100 ರಷ್ಟು ನಾನಾ ಮಳಿಗೆಗಳು ಮತ್ತು ಗಣ್ಯರು ಭಾಗವಹಿಸಲಿದ್ದು, ತಾಂತ್ರಿಕ ಸಮಾವೇಶ , ಹಲಸಿನಲ್ಲಿ ಸಾಧನೆಗೈದವರಿಗೆ ಸನ್ಮಾನ ಕೂಡಾ ಇದೆ ಎಂದರು.
ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯದ ಪ್ರಿನ್ಸಿಪಾಲ್ ಡಾ ಸುಧೀರ್ ಕಾಮತ್ , ರೋಟರಿಯ ಅಧ್ಯಕ್ಷ ದಿನೇಶ್ ನಾಯರಿ , ಉದಯ ಕುಮಾರ್ ಶೆಟ್ಟಿ, ಬಿಎಂ ಭಟ್ , ಆಲ್ವಿನ್ ಅಂದ್ರಾದೆ , ಗಣೇಶ್ ಶೆಟ್ಟಿ , ಅರುಣ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.

