ಕೋಲಾರ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಸವಾರರಾದ ತಂದೆ ಮತ್ತು ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಲಾರದ ಮುಳಬಾಗಿಲು ಬಳಿ ನಡೆದಿದೆ.
ಬೆಂಗಳೂರಿನ ರಾಜಾನಕುಂಟೆ ನಿವಾಸಿಗಳಾದ ಶಿವಪ್ಪ (49), ನಿತಿನ್ ( 25) ಮೃತರು ಎಂದು ಗುರುತಿಸಲಾಗಿದೆ.
ಕೆಲಸದ ನಿಮಿತ್ತ ಇಬ್ಬರು ಮುಳಬಾಗಿಲಿಗೆ ಆಗಮಿಸಿ ಬೆಂಗಳೂರಿಗೆ ವಾಪಸ್ ಆಗುವ ವೇಳೆ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಘಟನೆ ಸಂಭವಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಡಿವೈಎಸ್ಪಿ ಟಿ. ಆರ್ ಜಯಶಂಕರ್, ನಗರಠಾಣೆ ಇನ್‌ಸ್ಪೆಕ್ಟರ್ ಆರ್. ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

