ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾ ವಿಮಾನ ಎಐ 180 ತಾಂತ್ರಿಕ ಸಮಸ್ಯೆಯಿಂದಾಗಿ ರದ್ದಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪರ್ಯಾಯ ವಿಮಾನಗಳ ಆಯ್ಕೆ ಅಥವಾ ರದ್ದಾದ ವಿಮಾನಕ್ಕೆ ಸಂಪೂರ್ಣ ಮರುಪಾವತಿಯನ್ನು ನೀಡುವುದಾಗಿ ಏರ್ ಇಂಡಿಯಾ ಸಂಜೆ ಹೇಳಿಕೆ ನೀಡಿದೆ.
ತನ್ನ ಅತಿಥಿಗಳು ವಿಮಾನವನ್ನು ಹತ್ತುವವರೆಗೂ ಹೋಟೆಲ್ ವಸತಿ ಮತ್ತು ಸಾರಿಗೆಗಾಗಿ ಮಾಡಬಹುದಾದ ಎಲ್ಲಾ ವೆಚ್ಚಗಳನ್ನು ಮರುಪಾವತಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದೇ ವೇಳೆ ವಿಮಾನ ಪ್ರಯಾಣಿಕರು ಅವ್ಯವಸ್ಥೆಯ ಕುರಿತು ಕಿಡಿಕಾರಿದ್ದು, ಮುಂಬೈಗೆ ಹೋಗುವ ವಿಮಾನವನ್ನು ರದ್ದುಗೊಳಿಸುವ ಮೊದಲು ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಹಲವಾರು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು ಎಂದು ದೂರಿದ್ದಾರೆ.

