• Home  
  • ತಂದೆ ವರ್ಗಾವಣೆಯಾಗುವಾಗ ಮಗಳು ಅಧಿಕಾರ ಸ್ವೀಕಾರ ; ತಂದೆಯಿಂದಲೇ ಅಧಿಕಾರ ಸ್ವೀಕರಿಸಿದ ಮಗಳು
- ಪ್ರಚಲಿತ

ತಂದೆ ವರ್ಗಾವಣೆಯಾಗುವಾಗ ಮಗಳು ಅಧಿಕಾರ ಸ್ವೀಕಾರ ; ತಂದೆಯಿಂದಲೇ ಅಧಿಕಾರ ಸ್ವೀಕರಿಸಿದ ಮಗಳು

Share: ಮಂಡ್ಯ: ಅದೊಂದು ಭಾವುಕತೆಗೆ ಸಾಕ್ಷಿಯಾದ ಕ್ಷಣ. ಒಂದೆಡೆ ತಂದೆಯ ವರ್ಗಾವಣೆ, ಮತ್ತೊಂದೆಡೆ ಅದೇ ಸ್ಥಳಕ್ಕೆ ಮಗಳ ನಿಯೋಜನೆ. ಅಧಿಕಾರ ಹಸ್ತಾಂತರ ಮಾಡುವಾಗ ತಂದೆಗೆ ಹೆಮ್ಮೆ ಎನ್ನಿಸುವಂತಹ ಅನುಭವ. ಇತ್ತ ಮಗಳಿಗೂ ಖುಷಿ ನೀಡಿದ ಸಂದರ್ಭ.  ಹೌದು, ಇಂತಹದೊಂದು ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ. ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ‌.ಎಸ್.ವೆಂಕಟೇಶ್ ಅವರು ತನ್ನ ಮಗಳು ನೂತನ ಎಸ್ಐ ಬಿ.ವಿ.ವರ್ಷಾ ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರ ಮಾಡಿದ್ದು ವಿಶೇಷ ಎನ್ನಿಸಿಕೊಂಡಿತು. ಇದಕ್ಕೆ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. […]

ಮಂಡ್ಯ: ಅದೊಂದು ಭಾವುಕತೆಗೆ ಸಾಕ್ಷಿಯಾದ ಕ್ಷಣ. ಒಂದೆಡೆ ತಂದೆಯ ವರ್ಗಾವಣೆ, ಮತ್ತೊಂದೆಡೆ ಅದೇ ಸ್ಥಳಕ್ಕೆ ಮಗಳ ನಿಯೋಜನೆ. ಅಧಿಕಾರ ಹಸ್ತಾಂತರ ಮಾಡುವಾಗ ತಂದೆಗೆ ಹೆಮ್ಮೆ ಎನ್ನಿಸುವಂತಹ ಅನುಭವ. ಇತ್ತ ಮಗಳಿಗೂ ಖುಷಿ ನೀಡಿದ ಸಂದರ್ಭ.

 ಹೌದು, ಇಂತಹದೊಂದು ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ. ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ‌.ಎಸ್.ವೆಂಕಟೇಶ್ ಅವರು ತನ್ನ ಮಗಳು ನೂತನ ಎಸ್ಐ ಬಿ.ವಿ.ವರ್ಷಾ ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರ ಮಾಡಿದ್ದು ವಿಶೇಷ ಎನ್ನಿಸಿಕೊಂಡಿತು.

ಇದಕ್ಕೆ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. ಮಾತ್ರವಲ್ಲದೆ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ವೆಂಕಟೇಶ್ ಅವರು ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರು. 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಜತೆಗೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

  ಇವರನ್ನು ಮಿಲ್ಟ್ರಿ ಮ್ಯಾನ್ ಎಂತಲೂ ಕರೆಯಲಾಗುತ್ತದೆ. ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್‌ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು.

 ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯಕ್ಕೆ ಬಂದು ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

  2022ರ ಬ್ಯಾಚ್‌ನಲ್ಲಿ ಪಿಎಸ್‌ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಅವರ ಮೊದಲ ನಿಯೋಜನೆ ಕೂಡ ಮಂಡ್ಯದಲ್ಲೇ ಆಗಿದೆ. ಅದೂ ಕೂಡ ಅದೃಷ್ಟವೆಂಬಂತೆ ತನ್ನ ತಂದೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಸಿಕ್ಕಿದೆ.

  ಠಾಣೆಯಲ್ಲಿ ಮಂಗಳವಾರ ತಂದೆಯಿಂದಲೇ ಅಧಿಕಾರ ಪಡೆದುಕೊಂಡು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ. ಇವರು ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.