ಹೆಜಮಾಡಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ: ಕಾಮಗಾರಿ ಪರಿಶೀಲನೆ
ಅನುದಾನ ಕೊರತೆಯಿಂದ ನಿಧಾನವಾಗಿ ಸಾಗುತ್ತಿರುವ ಹೆಜಮಾಡಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಇಲಾಖಾಧಿಕಾರಿಗಳು, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಜತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರದಿಂದ ಬಾಕಿ ಇರುವ ರೂ.೫೪ ಕೋಟಿ ಅನುದಾನ ಬಿಡುಗಡೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕಾ ಸಚಿವರ ಜತೆಗೆ ಮಾತುಕತೆ ನಡೆಸಿ ಅನುದಾನ ಬಿಡುಗಡೆಗೆ ಶ್ರಮ ವಹಿಸುವುದಾಗಿ ಭರವಸೆ ನೀಡಿದರು.
ಬಂದರು ಯೋಜುನೆಯ ಪ್ರಾಥಮಿಕ ಹಂತವಾಗಿ ಶಾಂಭವಿ-ನAದಿನಿ ಹೊಳೆ ಸಂಗಮ ಅಳಿವೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ಬ್ರೇಕ್‌ವಾಟರ್ ಪ್ರದೇಶದಲ್ಲಿ ಬಿರು ಮಳೆ-ಗಾಳಿ ಮಧ್ಯೆ ಭೇಟಿ ನೀಡಿದ ಅವರು, ಬಂದರು ಮತ್ತು ಮೀನುಗಾರಿಕಾ ಇಲಾಖಾ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ ಮೂರ್ತಿ ಮತ್ತು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಉದಯ ಕುಮಾರ್ ಜತೆಗೆ ಬಂದರು ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.
ಬAದರು ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳ ಜತೆಗೆ ಕಾಪು ಶಾಸಕರ ಕಛೇರಿಯಲ್ಲಿ ಮತ್ತು ಗುತ್ತಿಗೆದಾರರ ಕಛೇರಿಯಲ್ಲಿ ಶಾಸಕ ಗುರ್ಮೆ ಸಭೆ ನಡೆಸಿದರು. ಈ ಸಂದರ್ಭ ಸ್ಥಳೀಯ ಮೀನುಗಾರ ಮುಖಂಡರೊAದಿಗೂ ಚರ್ಚೆ ನಡೆಸಿ ಬಂದರು ಯೋಜನೆ ಶೀಘ್ರ ಜಾರಿ ಬಗ್ಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಹೆಜಮಾಡಿ ಗ್ರಾಪಂ ಅಧ್ಯಕ್ಷ ಪಾಂಡುರAಗ ಸಿ.ಕರ್ಕೇರ, ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಮೀನುಗಾರ ಮುಖಂಡರಾದ ವಿಜಯ ಎಸ್. ಬಂಗೇರ, ಹರಿಶ್ಚಂದ್ರ ಮೆಂಡನ್, ರವಿ ಕುಂದರ್, ಶೇಖರ್ ಸಾಲ್ಯಾನ್, ಕರುಣಾಕರ ಕರ್ಕೇರ ಮತ್ತು ದಿವಾಕರ ಹೆಜ್ಮಾಡಿ, ಸದಸ್ಯರಾದ ಶರಣ್ ಕುಮಾರ್ ಮಟ್ಟು, ಜನಾರ್ಧನ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ವಾಮನ ಕೋಟ್ಯನ್ ನಡಿಕುದ್ರು ಮತ್ತು ಪ್ರಾಣೇಶ್ ಹೆಜ್ಮಾಡಿ, ಹೆಜಮಾಡಿ ಏಳೂರು ಮೊಗವೀರ ಸಭಾದ ಅಧ್ಯಕ್ಷ ಸದಾಶಿವ ಕೋಟ್ಯಾನ್, ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾದ ಅಧ್ಯಕ್ಷ ಸುಜಿತ್ ಎಸ್.ಸಾಲ್ಯಾನ್, ಬಿಜೆಪಿ ಮುಖಂಡ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮೇಶ್ ಎಸ್‌ಕೆ, ಬಂದರು ಮತ್ತು ಮೀನುಗಾರಿಕಾ ಇಲಾಖಾ ಎಇಇ ಜಯರಾಜ್ ಮತ್ತಿತರರು ಉಪಸ್ಥಿತರಿದ್ದರು.

