• Home  
  • ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಮೀನುಗಾರಿಕಾ ಗೋದಾಮು, ಸಂಗ್ರಹಿಸಿಟ್ಟ ಸೀಮೆ ಎಣ್ಣೆ ಸಹಿತ ೫ ಲಕ್ಷದ ಸೊತ್ತು ನಷ್ಠ
- ಕರಾವಳಿ

ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಮೀನುಗಾರಿಕಾ ಗೋದಾಮು, ಸಂಗ್ರಹಿಸಿಟ್ಟ ಸೀಮೆ ಎಣ್ಣೆ ಸಹಿತ ೫ ಲಕ್ಷದ ಸೊತ್ತು ನಷ್ಠ

Share: ಕಳೆದ ೩ ದಿನಗಳಿಂದ ತೀವ್ರ ಸಮುದ್ರ ಕೊರೆತ ಉಂಟಾಗಿದ್ದ ಪಡುಬಿದ್ರಿ–ಕಾಡಿಪಟ್ಣ ಬೀಚ್ ಬಳಿ ಶುಕ್ರವಾರ ಸಮುದ್ರದ ಉಗ್ರ ಸ್ವರೂಪದ ಅಲೆಗಳು ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮನ್ನು ಅಪೋಶನಗೈದಿದೆ. ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮು ಒಳಗಡೆ ಸೀಮೆ ಎಣ್ಣೆ ಸಂಗ್ರಹದ ಕಾಂಕ್ರೀಟ್ ಟ್ಯಾಂಕ್ ಸಹಿತ ಸುಮಾರು ರೂ.೫ಲಕ್ಷದ ಸೊತ್ತುಗಳು ಸಮುದ್ರ ಪಾಲಾಗಿದೆ ಎಂದು ಸ್ಥಳೀಯ ಮೀನುಗಾರರು ಅವಲತ್ತುಕೊಂಡಿದ್ದಾರೆ.  ಕೊರೆತ ಸ್ಥಳದ ಪಕ್ಕದಲ್ಲೇ ಮೀನುಗಾರಿಕಾ ರಸ್ತೆ ಇದೆ. ಶೀಘ್ರ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಮೀನುಗಾರಿಕಾ ರಸ್ತೆಯೂ ಸಮುದ್ರ ಪಾಲಾಗುವ […]

ಕಳೆದ ೩ ದಿನಗಳಿಂದ ತೀವ್ರ ಸಮುದ್ರ ಕೊರೆತ ಉಂಟಾಗಿದ್ದ ಪಡುಬಿದ್ರಿ–ಕಾಡಿಪಟ್ಣ ಬೀಚ್ ಬಳಿ ಶುಕ್ರವಾರ ಸಮುದ್ರದ ಉಗ್ರ ಸ್ವರೂಪದ ಅಲೆಗಳು ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮನ್ನು ಅಪೋಶನಗೈದಿದೆ.

ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮು ಒಳಗಡೆ ಸೀಮೆ ಎಣ್ಣೆ ಸಂಗ್ರಹದ ಕಾಂಕ್ರೀಟ್ ಟ್ಯಾಂಕ್ ಸಹಿತ ಸುಮಾರು ರೂ.೫ಲಕ್ಷದ ಸೊತ್ತುಗಳು ಸಮುದ್ರ ಪಾಲಾಗಿದೆ ಎಂದು ಸ್ಥಳೀಯ ಮೀನುಗಾರರು ಅವಲತ್ತುಕೊಂಡಿದ್ದಾರೆ.

 ಕೊರೆತ ಸ್ಥಳದ ಪಕ್ಕದಲ್ಲೇ ಮೀನುಗಾರಿಕಾ ರಸ್ತೆ ಇದೆ. ಶೀಘ್ರ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಮೀನುಗಾರಿಕಾ ರಸ್ತೆಯೂ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಸಮುದ್ರ ಕೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರು ಸ್ಥಳೀಯರ ಮನವಿಗೆ ಸ್ಪಂದಿಸಿ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಕಾಮಗಾರಿಗೆ ಸೂಚಿಸಿದ್ದರು. ಅದರಂತೆ ತುರ್ತು ಕಾಮಗಾರಿ ನಿಧಾನಗತಿಯಲ್ಲಿ ಆರಂಭಗೊAಡಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಭಾಗಿಯಾಗಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರೂ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದಾರೆ.

ಕಳೆದ ೩ ವರ್ಷಗಳಲ್ಲಿ ಕಡಲ್ಕೊರೆತ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ನಡೆಸಿದ ಗುತ್ತಿಗೆದಾರರನೇಕರಿಗೆ ಸುಮಾರು ರೂ.೫೪ ಕೋಟಿ ಬಾಕಿ ಇರಿಸಲಾಗಿದೆ. ಹಾಗಾಗಿ ಈ ಬಾರಿ ತುರ್ತು ಕಾಮಗಾರಿಗೆ ಯಾರೂ ಮುಂದೆ ಬರುತ್ತಿಲ್ಲ. ಆದಾಗ್ಯೂ ಗುತ್ತಿಗೆದಾರರೊಬ್ಬರು ಸೊರಕೆಯವರ ಮನವಿಗೆ ಸ್ಪಂದಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

 ಇಂದು  ಪಡುಬಿದ್ರಿಯ ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಲಿದ್ದು, ತುರ್ತು ಕಾಮಗಾರಿ ಬಗ್ಗೆ ಸ್ಪಷ್ಟತೆ ಸಿಗಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.