• Home  
  • ಹೆಜಮಾಡಿಯಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದ ಕಾರನ್ನು ಒಂದು ಕಿಲೋ ಮೀಟರ್ ಸೆಳೆದೊಯ್ದ ಟಿಪ್ಪರ್.
- ಅಪರಾಧ

ಹೆಜಮಾಡಿಯಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದ ಕಾರನ್ನು ಒಂದು ಕಿಲೋ ಮೀಟರ್ ಸೆಳೆದೊಯ್ದ ಟಿಪ್ಪರ್.

Share: ಹೆಜಮಾಡಿಯಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದ ಕಾರನ್ನು ಒಂದು ಕಿಲೋ ಮೀಟರ್ ಸೆಳೆದೊಯ್ದ ಟಿಪ್ಪರ್. ಸ್ಯಾಂಟ್ರೋ ಕಾರೊಂದು ಟಿಪ್ಪರ್ ಒಂದಕ್ಕೆ ಹಿಂಬದಿಯಿಂದ ಗುದ್ದಿ ಸಿಲುಕಿ ಕೊಂಡು, ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಸಾಗಿದ ಘಟನೆ ಸೋಮವಾರ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ 66ರ ಕನ್ನಂಗಾರು ಬೈಪಾಸ್ ಎದುರು ಘಟಿಸಿದೆ. ಉಡುಪಿ ಕಡೆಯಿಂದ ಸಾಗುತ್ತಿದ್ದ ಸ್ಯಾಂಟ್ರೋ ಕಾರು ಸ್ಥಳೀಯ ಟಿಪ್ಪರ್ ಗೆ ಹಿಂಬದಿಯಿಂದ ಸ್ಯಾಂಟ್ರೋ ಕಾರೊಂದು ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಟಿಪ್ಪರ್ ಹಿಂಭಾಗ ಸಿಲುಕಿಕೊಂಡಿದೆ. ಕಾರು ಸಿಲುಕಿಕೊಂಡಿದ್ದು, […]

ಹೆಜಮಾಡಿಯಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದ ಕಾರನ್ನು ಒಂದು ಕಿಲೋ ಮೀಟರ್ ಸೆಳೆದೊಯ್ದ ಟಿಪ್ಪರ್.

ಸ್ಯಾಂಟ್ರೋ ಕಾರೊಂದು ಟಿಪ್ಪರ್ ಒಂದಕ್ಕೆ ಹಿಂಬದಿಯಿಂದ ಗುದ್ದಿ ಸಿಲುಕಿ ಕೊಂಡು, ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಸಾಗಿದ ಘಟನೆ ಸೋಮವಾರ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ 66ರ ಕನ್ನಂಗಾರು ಬೈಪಾಸ್ ಎದುರು ಘಟಿಸಿದೆ.

ಉಡುಪಿ ಕಡೆಯಿಂದ ಸಾಗುತ್ತಿದ್ದ ಸ್ಯಾಂಟ್ರೋ ಕಾರು ಸ್ಥಳೀಯ ಟಿಪ್ಪರ್ ಗೆ ಹಿಂಬದಿಯಿಂದ ಸ್ಯಾಂಟ್ರೋ ಕಾರೊಂದು ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಟಿಪ್ಪರ್ ಹಿಂಭಾಗ ಸಿಲುಕಿಕೊಂಡಿದೆ. ಕಾರು ಸಿಲುಕಿಕೊಂಡಿದ್ದು, ಟಿಪ್ಪರ್ ಚಾಲಕನ ಗಮನಕ್ಕೆ ಬಂದಿಲ್ಲ.

ಹಿಂಬದಿಯಿಂದ ಬಂದ ಕಾರು ಚಾಲಕರೋರ್ವರು ಹೆಜಮಾಡಿ ಟೋಲ್ ಗೇಟ್ ಬಳಿ ಟಿಪ್ಪರನ್ನು ನಿಲ್ಲಿಸಿದ್ದಾರೆ. ಕಾರಿನಲ್ಲಿದ್ದ ಸಾಗರ ಮೂಲದ ಜಾಫರ್ ಖಾನ್, ಶಾಹಿನಾ, ಯಾಸಿರ್ ಖಾನ್ ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಮೂವರೂ ಸಾಗರದಿಂದ  ಮಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರು ಮತ್ತು ಟಿಪ್ಪರನ್ನು ವಶಕ್ಕೆ ಪಡೆದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.