ಕಿನ್ನಿಗೋಳಿಯಲ್ಲಿ ಜ್ಯುವೆಲರಿ ಅಂಗಡಿ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು
ಕಿನ್ನಿಗೋಳಿ; ಜ್ಯುವೆಲರಿ ಅಂಗಡಿ ಮಾಲಕರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕಿನ್ನಿಗೋಳಿಯ ರಾಮನಗರಲ್ಲಿ ನಡೆದಿದೆ.
ಕಿನ್ನಿಗೋಳಿ ನಿವಾಸಿ ಶ್ರೀಧರ ಆಚಾರ್ಯ ಜುವೆಲರ್ಸ್ನ ಮಾಲಕ ಉಮೇಶ್ ಆಚಾರ್ಯ (62) ಆತ್ಮಹತ್ಯೆಗೈದವರು.
ಮಾನಸಿಕ ಖಿನ್ನತೆಯಿಂದ ಅವರು ತನ್ನ ಮನೆಯ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿನ್ನಿಗೋಳಿ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾಗಿದ್ದ ಅವರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿದ್ದರು.

