ಕಾಪುವಿನ ಇನ್ನಂಜೆಯಲ್ಲಿ ಮಳೆಗೆ ಹಾನಿಯಾದ ಮನೆ ವೀಕ್ಷಿಸಿದ ಕಾಪು ಶಾಸಕ ಗುರ್ಮೆ, ಮನೆಯವರಿಗೆ ಸಾಂತ್ವನ
ಇನ್ನಂಜೆ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಂಜೆ ಶಿವಾನಂದ ಪ್ರಭುರವರ ಮನೆಗೆ ಹಾನಿ ಉಂಟಾಗಿದ್ದು, ಮಂಗಳವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿ, ಮನೆಯವರಿಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭ ಕಂದಾಯ ಅಧಿಕಾರಿಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳು, ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ ಮಾಲಿನಿ ಇನ್ನಂಜೆ, ಪಾಂಗಾಳ ಶಕ್ತಿ ಕೇಂದ್ರ ಸಂಚಾಲಕ ಪ್ರವೀಣ್ ಶೆಟ್ಟಿ, ಸಹ ಸಂಚಾಲಕ ದಿನೇಶ್ ಶೆಟ್ಟಿ, ಸ್ಥಳೀಯರಾದ ರವಿಪ್ರಸಾದ್, ಗಣೇಶ್ ಆಚಾರ್ಯ, ಮಹೇಶ್ ಪೂಜಾರಿ, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

