• Home  
  • ಪಡುಕಳತ್ತೂರು -“ಆಟಿದ ಗಮ್ಮತ್” ಸೌಹಾರ್ದ ಸಮ್ಮಿಲನ
- ಕರಾವಳಿ

ಪಡುಕಳತ್ತೂರು -“ಆಟಿದ ಗಮ್ಮತ್” ಸೌಹಾರ್ದ ಸಮ್ಮಿಲನ

Share: ಪಡುಕಳತ್ತೂರು -“ಆಟಿದ ಗಮ್ಮತ್” ಸೌಹಾರ್ದ ಸಮ್ಮಿಲನ ಸಂಸ್ಕಾರ ಎನ್ನುವುದು ಮನೆಯಲ್ಲಿ ಹುಟ್ಟಿದಾಗ ಮಾತ್ರ ಸಮಾಜದಲ್ಲೂ ಬೆಳೆಯುತ್ತದೆ – ಸುಧಾಕರ ಶೆಣೈ ಕಾಪು: ಮಳೆಗಾಲದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಪರಿಸರದಲ್ಲಿ ಸಿಗುವ ಆಹಾರ ವಸ್ತುಗಳನ್ನು ಬಳಸಿ ನಮ್ಮ ಹಿರಿಯರು ಅತ್ಯಂತ ಕಷ್ಟಕರ ಜೀವನ ನಡೆಸಿದ ತಿಂಗಳು ಆಟಿ ಆಗಿದ್ದು, ಇಂದು ಆಟಿದ ಗಮ್ಮತ್, ಆಟಿಡೊಂಜಿದಿನ ಆಗಿ ಸಂಭ್ರಮಿಸುವ ಮೂಲಕ ತುಳುನಾಡಿನಲ್ಲಿ ಹಿರಿಯರ ಜಾನಪದ ಪರಂಪರೆಯನ್ನು ಕುಟುಂಬ ಸಮೇತರಾಗಿ ಸ್ಮರಿಸುವ ಹಾಗೂ ಮುಂದಿನ ಪೀಳಿಗೆಗ ವರ್ಗಾಯಿಸುವ ಕಾರ್ಯ ನಡೆಯುತ್ತಿರುವುದು […]

ಪಡುಕಳತ್ತೂರು -“ಆಟಿದ ಗಮ್ಮತ್” ಸೌಹಾರ್ದ ಸಮ್ಮಿಲನ

ಸಂಸ್ಕಾರ ಎನ್ನುವುದು ಮನೆಯಲ್ಲಿ ಹುಟ್ಟಿದಾಗ ಮಾತ್ರ ಸಮಾಜದಲ್ಲೂ ಬೆಳೆಯುತ್ತದೆ – ಸುಧಾಕರ ಶೆಣೈ

ಕಾಪು: ಮಳೆಗಾಲದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಪರಿಸರದಲ್ಲಿ ಸಿಗುವ ಆಹಾರ ವಸ್ತುಗಳನ್ನು ಬಳಸಿ ನಮ್ಮ ಹಿರಿಯರು ಅತ್ಯಂತ ಕಷ್ಟಕರ ಜೀವನ ನಡೆಸಿದ ತಿಂಗಳು ಆಟಿ ಆಗಿದ್ದು, ಇಂದು ಆಟಿದ ಗಮ್ಮತ್, ಆಟಿಡೊಂಜಿದಿನ ಆಗಿ ಸಂಭ್ರಮಿಸುವ ಮೂಲಕ ತುಳುನಾಡಿನಲ್ಲಿ ಹಿರಿಯರ ಜಾನಪದ ಪರಂಪರೆಯನ್ನು ಕುಟುಂಬ ಸಮೇತರಾಗಿ ಸ್ಮರಿಸುವ ಹಾಗೂ ಮುಂದಿನ ಪೀಳಿಗೆಗ ವರ್ಗಾಯಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಕನ್ನಡ ಭಾಷಾ ಶಿಕ್ಷಕ ಹಾಗೂ ಕಲಾವಿದ ಪಿಲಾರು ಸುಧಾಕರ ಶೆಣೈ ನುಡಿದರು.

ಅವರು ರವಿವಾರ ಪಡುಕಳತ್ತೂರು ಹೊಸಮನೆ ದಿವಾಕರ ಶೆಟ್ಟಿರವರ ನಿವಾಸದಲ್ಲಿ ಶಿರ್ವ ರೋಟರಿ ವತಿಯಿಂದ ಜರುಗಿದ ಕುಟುಂಬ ಸೌಹಾರ್ದ ಸಮ್ಮಿಲನದಲ್ಲಿ  “ಆಟಿದ ಗಮ್ಮತ್” ಕಾರ್ಯಕ್ರಮವನ್ನು ಕಲಶಕ್ಕೆ ಅಕ್ಕಿ ಸುರಿಯುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಳತ್ತೂರಿನ ಹಿರಿಯ ಪ್ರಗತಿಪರ ಕೃಷಿಕರುಗಳಾದ  ವಿಶ್ವನಾಥ ಅಮೀನ್, ಲಿಯೋ ಮೆಂಡೋನ್ಸಾ, ನಾರಾಯಣ ನಾಯ್ಕರವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಮೊಹಮ್ಮದ್ ಫಾರೂಖ್ ವಹಿಸಿದ್ದರು.

ವೇದಿಕೆಯಲ್ಲಿ ನಿವೃತ್ತ ಯೋಧ ಹಿರಿಯರಾದ ಗೋಪಾಲ ಪೂಜಾರಿ, ವಲದೂರು ನಾರಾಯಣ ಶೆಟ್ಟಿ,  ದಿವಾಕರ ಡಿ.ಶೆಟ್ಟಿ, ಚೇತನಾ ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಹೊನ್ನಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಅರುಣ್ ಹೆಗ್ಡೆ ಪರಿಚಯಿಸಿದರು. ವೃತ್ತಿಸೇವಾ ನಿರ್ದೇಶಕ ಮೈಕಲ್ ಮತಾಯಸ್ ಸ್ವಾಗತಿಸಿದರು. ವಿಲಿಯಮ್ ಮಚಾದೊ ನಿರೂಪಿಸಿದರು. ಜೋಯಲ್ ಮತಾಯಸ್ ಪ್ರಾರ್ಥಿಸಿದರು.  ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ಧನ್ಯವಾದವಿತ್ತರು.

ಈ ಸಂದರ್ಭ ವಿವಿಧ ಜಾನಪದ ಆಟೋಟ ಸ್ಫರ್ಧೆಗಳು, ಸೌಹಾರ್ದ ಆಟಗಳು ಜರುಗಿವು.

ಸ್ಫರ್ಧಾ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಆಟಿಯ ವೈವಿಧ್ಯ ಖಾದ್ಯಗಳೊಂದಿಗೆ ಸೌಹಾರ್ದ ಭೋಜನಕೂಟ ಏರ್ಪಡಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.