ಕೋಟ- ಅನಾರೋಗ್ಯಕ್ಕೆ ತುತ್ತಾದ ಬಿ.ಕೆ ಶ್ರೀನಿವಾಸ ಪೂಜಾರಿ ಮಿಡಿದ ಕೋಟದ ಜೀವನ್ ಮಿತ್ರ ಬಳಗ
ಕೋಟ: ಸದಾ ಕ್ರೀಯಾಶೀಲತೆ ಸಾಮಾಜಿಕ ಸೇವೆಯ ಮೂಲಕ ಮನೆ ಮಾತಾಗಿರುವ ಕೋಟದ ಜೀವನ್ ಮಿತ್ರ ಬಳಗ ಇದೀಗ ಮತ್ತೊಂದು ಸೇವಾ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಇಲ್ಲಿನ ಸಮೀಪದ ಯಡ್ತಾಡಿ ಬಿ.ಕೆ ಶ್ರೀನಿವಾಸ ಪೂಜಾರಿ ಎನ್ನುವವರು ಕಳೆದ ಎರಡು ವರ್ಷಗಳಿಂದ ಎರಡು ಕಿಡ್ನಿ ಅನಾರೋಗ್ಯಕ್ಕಿಡಾಗಿ ಅಸಾಯಕ ಸ್ಥಿತಿಯಲ್ಲಿದ್ದು, ಆರ್ಥಿಕ ಸಹಾಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು.
ಈ ವಿಚಾರ ತಿಳಿದ ಕೋಟದ ಜೀವನ್ ಮಿತ್ರ ಬಳಗದ ಮುಖ್ಯಸ್ಥ ನಾಗರಾಜ್ ಪುತ್ರನ್ ತನ್ನ ಸಂಗಡಿಗರ ಜೊತೆಗೂಡಿ ಸಾಸ್ತಾನ ಟೋಲ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಮಾರು ೫೭ಸಾವಿರೂ ರೂ ಅಧಿಕ ಹಣ ಒಗ್ಗೂಡಿಸಿ ಅದನ್ನು ಸಾಹೇಬರಕಟ್ಟೆ ಸಮೀಪ ಕಾಜ್ರಳ್ಳಿ ವನದುರ್ಗಪರಮೇಶ್ವರಿ ದೇವಸ್ಥಾನ ಇದರ ಮುಕ್ತೇಸರ ಅಲ್ತಾರು ನಿರಂಜನ ಹೆಗ್ಡೆ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಇವರ ಈ ಕಾರ್ಯಕ್ಕೆ ಯುವ ವಾಹಿನಿ ಯಡ್ತಾಡಿ, ಸಂಜೀವಿನಿ ಸೇವಾ ಫೌಂಡೇಶನ್ ಮಣಿಪಾಲ ಕೈಜೋಡಿಸಿತು.
ಈ ಸಂದರ್ಭದಲ್ಲಿ ಸಂಜೀವಿನಿ ಸೇವಾ ಫೌಂಡೇಶನ್ ಮಣಿಪಾಲ ಉಡುಪಿ, ಸಂದೀಪ್ ಅಮೀನ್, ನಾಗರಾಜ್ ಕುಲಾಲ್ ಮಹೇಶ್ ಪೂಜಾರಿ, ನಿತೀಶ್ ಮೊಗವೀರ, ಅರುಣ್, ಆಕಾಶ್, ಪವನ್ ಮತ್ತಿತರರು ಉಪಸ್ಥಿತರಿದ್ದರು.

