• Home  
  • ಚಂದ್ರಯಾನ 3 : ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂತಿಮ ಕಕ್ಷೆ ಪ್ರವೇಶ
- ಪ್ರಚಲಿತ - ಪ್ರಯಾಣ

ಚಂದ್ರಯಾನ 3 : ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂತಿಮ ಕಕ್ಷೆ ಪ್ರವೇಶ

Share: ಚಂದ್ರಯಾನ 3 : ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂತಿಮ ಕಕ್ಷೆ ಪ್ರವೇಶ ಚಂದ್ರಯಾನ 3 ಇಸ್ರೋ:  LVM3-M4 ನೌಕೆಯ ಲ್ಯಾಂಡರ್ ‘ವಿಕ್ರಮ್(Vikram)’ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದ್ದು, ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಸದ್ಯ ಭಾರತದ ಕನಸಿನ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಈ ಮೂಲಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ. ಬಾಹ್ಯಾಕಾಶ ನೌಕೆ 150 […]

ಚಂದ್ರಯಾನ 3 : ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂತಿಮ ಕಕ್ಷೆ ಪ್ರವೇಶ

ಚಂದ್ರಯಾನ 3

ಇಸ್ರೋ:  LVM3-M4 ನೌಕೆಯ ಲ್ಯಾಂಡರ್ ‘ವಿಕ್ರಮ್(Vikram)’ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದ್ದು, ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ.

ಸದ್ಯ ಭಾರತದ ಕನಸಿನ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಈ ಮೂಲಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ.

ಬಾಹ್ಯಾಕಾಶ ನೌಕೆ 150 ಕಿ.ಮೀ × 177 ಕಿ.ಮೀ ವೃತ್ತಾಕಾರದ ಕಕ್ಷೆಯನ್ನು ತಲುಪಿದೆ.

 LM ಅನ್ನು ಪ್ರೊಪಲ್ಷನ್ ಮಾಡ್ಯೂಲ್ (PM) ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ನಾಳೆಗೆ ಯೋಜಿಸಲಾದ ಡೀಬೂಸ್ಟಿಂಗ್ ಮೇಲೆ LM ಸ್ವಲ್ಪ ಕಡಿಮೆ ಕಕ್ಷೆಗೆ ಇಳಿಯಲಿದೆ” ಎಂದು ISRO ಟ್ವೀಟ್‌ನಲ್ಲಿ ತಿಳಿಸಿದೆ.

 ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಪೋಲಾರ್‌ ಪ್ರಾಂತ್ಯದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಆಗಲು ಆಗಸ್ಟ್‌ 23ರಂದು ಪ್ರಯತ್ನಿಸಲಾಗುವುದು ಎಂದು ಇಸ್ರೋ ಹೇಳಿದೆ.

 ಚಂದ್ರನನ್ನು ಸ್ಪರ್ಶಿಸಿದ ಮೇಲೆ ಪ್ರಗ್ಯಾನ್‌ ರೋವರ್‌ನ ಛಾಯಾಚಿತ್ರವನ್ನು ಲ್ಯಾಂಡರ್‌ ತೆಗೆಯಲಿದ್ದು, ಅದು ಚಂದಿರನ ಅಂಗಳದಲ್ಲಿನ ಸೀಸ್ಮಿಕ್‌ ಚಟುವಟಿಕೆಯನ್ನು ಅಧ್ಯಯನ ನಡೆಸುವ ಉಪಕರಣಗಳನ್ನು ಅಲ್ಲಿ ನಿಯೋಜಿಸಲಿದೆ.

 ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾನ -3 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಯಿತು. ಬಾಹ್ಯಾಕಾಶ ನೌಕೆ ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ್ದು, ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.