• Home  
  • ಬಂಟ್ವಾಳ: ಕು| ಭಾರತಿ, ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ
- ಅಪರಾಧ

ಬಂಟ್ವಾಳ: ಕು| ಭಾರತಿ, ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ

Share: ಬಂಟ್ವಾಳ: ಕು| ಭಾರತಿ, ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ ಬಂಟ್ವಾಳ: ಸೌಜನ್ಯ ಕೊಲೆ ಪ್ರಕರಣದ ಹೋರಾಟದ ಬಿಸಿಯ ಜೊತೆ 20 ವರ್ಷಗಳ ಹಿಂದೆ ನಡೆದ ಬಂಟ್ವಾಳದ ಸಿದ್ಧಕಟ್ಟೆಯ ಕು|ಭಾರತಿ ಕೊಲೆ ಮತ್ತು ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಒತ್ತಾಯಿಸಿ  ಶುಕ್ರವಾರ ಬಂಟ್ವಾಳ ತಹಶಿಲ್ದಾರರ ಮೂಲಕ ಮಾಜಿ ಜಿ.ಪಂ. ಉಪಾಧ್ಯಕ್ಷರಾದ ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ  ಮನವಿ ನೀಡಲಾಯಿತು.  ಈ ಸಂಧರ್ಭದಲ್ಲಿ ಪಿಲಾತಬೆಟ್ಟು […]

ಬಂಟ್ವಾಳ: ಕು| ಭಾರತಿ, ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ

ಬಂಟ್ವಾಳ: ಸೌಜನ್ಯ ಕೊಲೆ ಪ್ರಕರಣದ ಹೋರಾಟದ ಬಿಸಿಯ ಜೊತೆ 20 ವರ್ಷಗಳ ಹಿಂದೆ ನಡೆದ ಬಂಟ್ವಾಳದ ಸಿದ್ಧಕಟ್ಟೆಯ ಕು|ಭಾರತಿ ಕೊಲೆ ಮತ್ತು ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಒತ್ತಾಯಿಸಿ  ಶುಕ್ರವಾರ ಬಂಟ್ವಾಳ ತಹಶಿಲ್ದಾರರ ಮೂಲಕ ಮಾಜಿ ಜಿ.ಪಂ. ಉಪಾಧ್ಯಕ್ಷರಾದ ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ  ಮನವಿ ನೀಡಲಾಯಿತು.

 ಈ ಸಂಧರ್ಭದಲ್ಲಿ ಪಿಲಾತಬೆಟ್ಟು ಗ್ರಾ. ಪಂ ಅಧ್ಯಕ್ಷರಾದ ಶ್ರೀಮತಿ ಶಾರದ, ಅಮ್ಟಾಡಿ ಗ್ರಾ.ಪಂ. ಸ. ಸೇ. ಸ. ಬೇಂಕ್ ಅಧ್ಯಕ್ಷ ವಿಜಯ ಕುಮಾರ್, ಸುರೇಶ್ ಕುಲಾಲ್ ,  ಪಿಲಾತಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಗಂಗಾಧರ ಪೂಜಾರಿ ಕಜೆಕಾರು, ತಾರಾನಾಥ್ ಕಜೆಕಾರು, ಮಧು ನಾಡೇಲು, ಪ್ರಭಾಕರ ಪಿ.ಯಂ ನಿರ್ದೇಶಕರು- ಪಿಲಾತಬೆಟ್ಟು ವ್ಯ ಸ. ಸಂಘ, ಪ್ರಮೋದ್ ಕುಮಾರ್ ಮೂರ್ಜೆ ಇತರ ಅನೇಕ ನ್ಯಾಯಪರ ಹೋರಾಟಗಾರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.