• Home  
  • ಚಂದ್ರಯಾನ  3 : ಬಿಬಿಸಿಗೆ ಆನಂದ್ ಮಹೇಂದ್ರ ಟಾಂಗ್
- ತಂತ್ರಜ್ಞಾನ - ದೇಶ-ವಿದೇಶ

ಚಂದ್ರಯಾನ  3 : ಬಿಬಿಸಿಗೆ ಆನಂದ್ ಮಹೇಂದ್ರ ಟಾಂಗ್

Share: ಚಂದ್ರಯಾನ 3: ಬಿಬಿಸಿಗೆ ಆನಂದ್ ಮಹೇಂದ್ರ ಟಾಂಗ್ ಮುಂಬೈ: ಚಂದ್ರಯಾನ 3 ಯೋಜನೆಯ ಯಶಸ್ಸಿನ ಬೆನ್ನಲ್ಲೇ ಬಿಬಿಸಿಯ ಹಳೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.   “೭೦ ಕೋಟಿಗೂ ಅಧಿಕ ಜನರಿಗೆ ಸರಿಯಾದ ಶೌಚಾಲಯ ಹಾಗೂ ಇತರ ಸೌಕರ್ಯಗಳು ಇಲ್ಲದ ಹೊತ್ತಲ್ಲಿ ಭಾರತವು ಬಾಹ್ಯಾಕಾಶ ಸಂಶೋಧನೆಗೆ ಏಕೆ ಕೋಟಿಗಟ್ಟಲೆ ಹಣ ಏಕೆ ಸುರಿಯಬೇಕು,” ಎಂದು ಪ್ರಶ್ನಿಸಿದ್ದ ಬಿಬಿಸಿ ಆಂಕರ್ ನ ಧೋರಣೆಯನ್ನು ಮಹೇಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೇಂದ್ರ ಖಂಡಿಸಿದ್ದಾರೆ.  ದಶಕಗಳ ಕಾಲ ನಮ್ಮನ್ನು ಆಳಿದ […]

ಚಂದ್ರಯಾನ 3: ಬಿಬಿಸಿಗೆ ಆನಂದ್ ಮಹೇಂದ್ರ ಟಾಂಗ್

ಮುಂಬೈ: ಚಂದ್ರಯಾನ 3 ಯೋಜನೆಯ ಯಶಸ್ಸಿನ ಬೆನ್ನಲ್ಲೇ ಬಿಬಿಸಿಯ ಹಳೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

  “೭೦ ಕೋಟಿಗೂ ಅಧಿಕ ಜನರಿಗೆ ಸರಿಯಾದ ಶೌಚಾಲಯ ಹಾಗೂ ಇತರ ಸೌಕರ್ಯಗಳು ಇಲ್ಲದ ಹೊತ್ತಲ್ಲಿ ಭಾರತವು ಬಾಹ್ಯಾಕಾಶ ಸಂಶೋಧನೆಗೆ ಏಕೆ ಕೋಟಿಗಟ್ಟಲೆ ಹಣ ಏಕೆ ಸುರಿಯಬೇಕು,” ಎಂದು ಪ್ರಶ್ನಿಸಿದ್ದ ಬಿಬಿಸಿ ಆಂಕರ್ ನ ಧೋರಣೆಯನ್ನು ಮಹೇಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೇಂದ್ರ ಖಂಡಿಸಿದ್ದಾರೆ.

 ದಶಕಗಳ ಕಾಲ ನಮ್ಮನ್ನು ಆಳಿದ ವಸಾಹತುಶಾಹಿ ಆಳ್ವಿಕೆಯ ಪರಿಣಾಮದಿಂದ ಬಡತನ ಸೃಷ್ಟಿಯಾಗಿದೆ. ಇಡೀ ಭಾರತ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ಕೊಳ್ಳೆಹೊಡೆಯಲಾಗಿದೆ. ಇದರ ಮಧ್ಯೆಯೂ  ಭಾರತವಿಂದು ಸದೃಢ ರಾಷ್ಟ್ರವಾಗಿ ಬೆಳೆದು ನಿಂತಿದೆ.

ಚಂದ್ರನ ಕುರಿತ ನಮ್ಮ ಈ ಯಶಸ್ಸು ಆತ್ಮವಿಶ್ವಾಸ ಹಾಗೂ ಹಿರಿಮೆಯನ್ನು ಹೆಚ್ಚಿಸುತ್ತದೆ. ಶೌಚಾಲಯಗಳ ನಿರ್ಮಾಣಕ್ಕೆ ವೆಚ್ಚ ಮಾಡುವುದರ ಜೊತೆ ಜೊತೆಗೆ ಬಾಹ್ಯಾಕಾಶ ಯೋಜನೆಗಳಿಗೂ ಹಣ ವಿನಿಯೋಗಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ನಮ್ಮನ್ನು ಬಡತನದಿಂದ ಹೊರ ತರುವ ಆಕಾಂಕ್ಷೆಯನ್ನು ಜಾಗೃತಗೊಳಿಸುತ್ತದೆ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.