
ಗ್ರಾನೈಟ್ ಅನ್ ಲೋಡ್ ಮಾಡುವಾಗ ಅವಘಡ- ಇಬ್ಬರು ಒಡಿಸಾ ಮೂಲದ ಕಾರ್ಮಿಕರ ದಾರುಣ ಸಾವು
ಮಲ್ಪೆ: ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ಭಾರೀ ಅವಘಡ ಸಂಭವಿಸಿದ್ದು, ಇಬ್ಬರು ಒಡಿಸಾ ಮೂಲದ ಕಾರ್ಮಿಕರು ಮೃತಪಟ್ಟ ಘಟನೆ ಸಂಭವಿಸಿದೆ.
ಇವರು ನಿರ್ಮಾಣ ಹಂತದ ಮನೆಯೊಂದಕ್ಕೆ ಬಂದ ಗ್ರಾನೈಟ್ ನ್ನು ಲಾರಿಯಿಂದ ಅನ್ ಲೋಡ್ ಮಾಡುವಾಗ ಗ್ರಾನೈಟ್ ಮೈಮೇಲೆ ಬಿದ್ದು ಈ ಅವಘಡ ಸಂಭವಿಸಿದೆ.
ಸುಮಾರು 30 ರಿಂದ 35 ವರ್ಷದ ಈ ಯುವಕರು ಇಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಮೃತರನ್ನು
ಬಾಬುಲ್ಲ ಮತ್ತು ಭಾಸ್ಕರ್ ಎಂದು ಗುರುತಿಸಲಾಗಿದೆ.
ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

