ಬೈಂದೂರಿನಲ್ಲಿ ಜಮೀನಿಗೆ ಬಂದ ಹಸುಗಳಿಗೆ ನಾಡಕೋವಿಯಿಂದ ಶೂಟ್ : ಎರಡು ಹಸುಗಳು ಸಾವು
ಉಡುಪಿ: ತನ್ನ ಜಮೀನಿಗೆ ಮೇಯಲು ಬಂದ ಹಸುಗಳಿಗೆ ನಾಡಕೋವಿಯಿಂದ ಗುಂಡು ಹಾರಿಸಿ ಎರಡು ದನಗಳನ್ನು ಕೊಲೆ ಮಾಡಿದ ಅಮಾನವೀಯ ಕೃತ್ಯ ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಪರಿಸರದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಗುಂಡು ಹಾರಿಸಿದ್ದಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಲಾಬಿ ಎಂಬ ಮಹಿಳೆಯ ಎರಡು ಹಸುಗಳು ಮೃತಪಟ್ಟಿದ್ದು, ಸುಮಾರು ಆರು ಹಸುಗಳಿಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ನರಸಿಂಹ, ಹಸುಗಳ ಮಾಲೀಕರಿಗೆ ದೂರು ದಾಖಲಿಸದಂತೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ.

