• Home  
  •  ಕಾಪುವಿನ ಮಜೂರಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಬಿದ್ದ ಮರ : ಸ್ಥಳದಲ್ಲಿಯೇ ಸಾವು
- ಅಪರಾಧ

 ಕಾಪುವಿನ ಮಜೂರಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಬಿದ್ದ ಮರ : ಸ್ಥಳದಲ್ಲಿಯೇ ಸಾವು

Share:  ಕಾಪುವಿನ ಮಜೂರಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಬಿದ್ದ ಮರ : ಸ್ಥಳದಲ್ಲಿಯೇ ಸಾವು ಕಾಪು : ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂದಾಡಿಯಲ್ಲಿ ಆಲದಮರವೊಂದನ್ನು ಕಡಿಯುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮಜೂರಿನಲ್ಲಿ ನಡೆದಿದೆ.  ಮೃತಪಟ್ಟ ವ್ಯಕ್ತಿ ಸುಧೀರ್ ಮಾಂಜಿ (59) ಬಿಹಾರ ಮೂಲದವನಾಗಿದ್ದು. ಮರದ ಗೆಲ್ಲುಗಳನ್ನು ಕಡಿದ ಬಳಿಕ ಇಡಿ ಮರವೇ ಧರೆಗುರುಳಿ ಮೂವರ ಮೇಲೆ ಬಿದ್ದಿದ್ದು ಇಬ್ಬರು ಗಾಯಗೊಂಡು  ಪ್ರಾಣಾಪಾಯದಿಂದ ಪಾರಾಗಿದ್ದರೆ  ಓರ್ವ  […]

 ಕಾಪುವಿನ ಮಜೂರಿನಲ್ಲಿ ಕೂಲಿ ಕಾರ್ಮಿಕನ ಮೇಲೆ ಬಿದ್ದ ಮರ : ಸ್ಥಳದಲ್ಲಿಯೇ ಸಾವು

ಕಾಪು : ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂದಾಡಿಯಲ್ಲಿ ಆಲದಮರವೊಂದನ್ನು ಕಡಿಯುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮಜೂರಿನಲ್ಲಿ ನಡೆದಿದೆ.

 ಮೃತಪಟ್ಟ ವ್ಯಕ್ತಿ ಸುಧೀರ್ ಮಾಂಜಿ (59) ಬಿಹಾರ ಮೂಲದವನಾಗಿದ್ದು. ಮರದ ಗೆಲ್ಲುಗಳನ್ನು ಕಡಿದ ಬಳಿಕ ಇಡಿ ಮರವೇ ಧರೆಗುರುಳಿ ಮೂವರ ಮೇಲೆ ಬಿದ್ದಿದ್ದು ಇಬ್ಬರು ಗಾಯಗೊಂಡು  ಪ್ರಾಣಾಪಾಯದಿಂದ ಪಾರಾಗಿದ್ದರೆ  ಓರ್ವ  ವ್ಯಕ್ತಿ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.