ಗುತ್ತಿಗೆದಾರನ ಸಂಬoಧಿಕನ ಮನೆ ಮೇಲೆ ಐಟಿ ದಾಳಿ ; ಮಂಚದ ಕೆಳಗೆ 42 ಕೋಟಿ ಹಣ ಪತ್ತೆ
(Bengaluru) ಬೆಂಗಳೂರು : ಕಾಂಗ್ರೆಸ್ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಅವರ ಬಾವಮೈದ ಪ್ರದೀಪ್ ಎಂಬಾತನ ಮನೆ ಮೇಲೆ ಇಂದು ಬೆಳಗ್ಗಿನ ಜಾವ ಅಯಕರ ದಾಳಿ ನಡೆದಿದ್ದು, ಈ ವೇಳೆ ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ.
ಫ್ಲಾಟ್ನಲ್ಲಿ ಬರೊಬ್ಬರಿ 23 ಕಾರ್ಟೂನ್ ಬಾಕ್ಸ್ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಮಂಚದಡಿಯಲ್ಲಿ ಪತ್ತೆಯಾಗಿವೆ.
ಗುತ್ತಿಗೆದಾರ ಅಂಬಿಕಾಪತಿ ಅವರ ಪತ್ನಿಯಾಗಿರುವ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಎನ್ನಲಾಗುತ್ತಿದೆ.
ಅಶ್ವತಮ್ಮ 2001ರ ಕಾವಲ್ ಬೈರಸಂದ್ರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದರು. ಈ ಫ್ಲಾಟನ್ನು ಅಶ್ವಥಮ್ಮ ತಮ್ಮ ಸಹೋದರ ಪ್ರದೀಪ್ ಅವರಿಗೆ ಕೊಡಿಸಿದ್ದರು ಎನ್ನಲಾಗಿದೆ.
ಅಂಬಿಕಾಪತಿ ಅಶ್ವಥಮ್ಮ ದಂಪತಿಗಳಿಗೆ ಸೇರಿದ ಇತರ ಎರಡು ನಿವಾಸಗಳ ಮೇಲೂ ದಾಳಿ ನಡೆದಿದೆ. ಐಟಿ ದಾಳಿ ಸ್ವಲ್ಪ ತಡವಾಗುತ್ತಿದ್ದರೂ ಈ ಹಣ ಸಿಗುತ್ತಿರಲಿಲ್ಲ. ಈ ಬೃಹತ್ ಮೊತ್ತದ ಹಣವನ್ನು ತಮಿಳುನಾಡಿಗೆ ಸಾಗಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ.
42 ಕೋಟಿ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

