ಅವಕಾಶ ನೀಡುವುದು ತಪ್ಪು: ಉಡುಪಿಯಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮತಾಲಿಕ್ (pramod muthalik at Udupi)
(UDUPI) ಉಡುಪಿ: ದೇವಸ್ಥಾನದ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದು ತಪ್ಪು. ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿರುವುದಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಶ್ರೀರಾಮಸೇನೆಯ ಪ್ರಮೋದ್ ಮತಾಲಿಕ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಗೋಹತ್ಯೆಗೆ ಬೆಂಬಲ ನೀಡುವವರು ಮುಸ್ಲಿಮರು. ಅವರು ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಕೂಡದು. ಒಬ್ವನೇ ದೇವರನ್ನು ನಂಬುವ ಅವರು , ಬಹು ದೇವಾರಾಧನೆ ಮಾಡುವ ಹಿಂದೂಗಳ ದೇವಸ್ಥಾನದಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುವುದು ಸರಿಯೆ?
ಮಂಗಳಾದೇವಿ ಮಾತ್ರ ಅಲ್ಲ , ಯಾವುದೇ ದೇವಸ್ಥಾನದ ಆವರಣದಲ್ಲೂ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ಹೇಳಿದರು.
