ಕಾರ್ಕಳ ಬಿಜೆಪಿ ಕಚೇರಿ ವಿಕಾಸದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ: ಪರಶುರಾಮ ಪ್ರತಿಮೆ ಬಗ್ಗೆ ಅನುಮಾನಗಳಿದ್ದರೆ ತನಿಖೆ ನಡೆಸಲು ಶಾಸಕ ಸುನಿಲ್ ಕುಮಾರ್ ಸವಾಲು
(karkala\ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನ ಕುರಿತು ಕಾಂಗ್ರೆಸ್ ನಾಯಕರು ವಿನಾಕಾರಣ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಪರಶುರಾಮ ಪ್ರತಿಮೆಯ ಕುರಿತು ಕಾಂಗ್ರೆಸ್ ನಾಯಕರಿಗೆ ಅನುಮಾನಗಳಿದ್ದರೆ, ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ ನಿಮಗೆ ತನಿಖೆ ಮಾಡಲು ಅಡ್ಡಿಪಡಿಸಿದವರು ಯಾರು? ತನಿಖೆಗೆ ಮುಕ್ತ ಅವಕಾಶವಿದೆ ಎಂದು ಶಾಸಕ ಸುನಿಲ್ ಕುಮಾರ್ ಸವಾಲು ಹಾಕಿದರು
ಕಾರ್ಕಳವನ್ನು ಪ್ರೀತಿಸುವವರು ಕ್ಷೇತ್ರದ ಅಭಿವೃದ್ದಿ ಮಾಡುತ್ತಾರೆ. ಕಾರ್ಕಳವನ್ನು ದ್ವೇಷಿಸುವವರು ಕಾರ್ಕಳದ ಕುರಿತು ಅಪಪ್ರಚಾರ ಮಾಡುವ ಮೂಲಕ ಅಭಿವೃದ್ಧಿಯನ್ನು ದ್ವೇಷಿಸುತ್ತಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಮ್ಯುನಿಸ್ಟರು, ಎಡಪಂಥೀಯರು, ನಗರ ನಕ್ಸಲರು, ಅನ್ಯಮತೀಯರು ಬಿಜೆಪಿಯ ರಾಷ್ಟ್ರೀಯ ಸಿದ್ದಾಂತಗಳ ಮೇಲೆ ಸಂಘಟಿತರಾಗಿ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಎದೆಗುಂದುವ ಪ್ರಶ್ನೆಯೇ ಇಲ್ಲವೆಂದರು.
ನಿಮಗೆ ಮೂರ್ತಿಯ ಬಗ್ಗೆ ಅನುಮಾನಗಳಿದ್ದರೆ ಯಾಕೆ ತನಿಖೆ ಮಾಡಿಲ್ಲ. ಗುಣಮಟ್ಟದಲ್ಲಿ ಹಾಗೂ ಮೂರ್ತಿಯಲ್ಲಿ ವ್ಯತ್ಯಾಸಗಳಿದ್ದರೆ ತನಿಖೆ ಮಾಡಿ. ಅನುದಾನ ಬಿಡುಗಡೆಗೆ ಸಿದ್ದರಿಲ್ಲ. ಅಪಪ್ರಚಾರ ನಿಲ್ಲಿಸಲು ಸಿದ್ದರಿಲ್ಲ.
ಈ ಯೋಜನೆಗೆ 16.50 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಉದಯ ಶೆಟ್ಟಿಯವರಿಗೆ ಬದ್ದತೆಯಿದ್ದರೆ ಕಾರ್ಕಳದ ಅಭಿವೃದ್ಧಿ ಬಗ್ಗೆ ಅಭಿಮಾನವಿದ್ದರೆ, ಬಾಕಿ ಅನುದಾನ ಬಿಡುಗಡೆ ಮಾಡಿ ಎಂದು ಶಾಸಕ ಸುನಿಲ್ ಕುಮಾರ್ ಸವಾಲು ಹಾಕಿದರು.
ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನ ಕುರಿತು ಕಾಂಗ್ರೆಸ್ ನಾಯಕರು ವಿನಾಕಾರಣ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಪರಶುರಾಮ ಪ್ರತಿಮೆಯ ಕುರಿತು ಕಾಂಗ್ರೆಸ್ ನಾಯಕರಿಗೆ ಅನುಮಾನಗಳಿದ್ದರೆ, ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ ನಿಮಗೆ ತನಿಖೆ ಮಾಡಲು ಅಡ್ಡಿಪಡಿಸಿದವರು ಯಾರು? ತನಿಖೆಗೆ ಮುಕ್ತ ಅವಕಾಶವಿದೆ ಎಂದು ಶಾಸಕ ಸುನಿಲ್ ಕುಮಾರ್ ಸವಾಲು ಹಾಕಿದರು
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಒಬ್ಬ ಗುತ್ತಿಗೆದಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಲೋಕಸಭಾ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಪರಶುರಾಮ ಮೂರ್ತಿಯ ಪ್ರತಿಮೆಯ ಕುರಿತು ಸುಳ್ಳು ಆರೋಪ ಹೊರಿಸಿ ಈ ಪ್ರಕರಣವನ್ನು ಜೀವಂತವಾಗಿರಿಸಿ ಗೆಲ್ಲುವ ಪ್ರಯತ್ನ ಕಾಂಗ್ರೆಸ್ ನಡೆಸುತ್ತಿದೆ, ಬಿಜೆಪಿಯ ವಿರುದ್ದ ಇಂತಹ ಕೀಳುಮಟ್ಟದ ವರ್ತನೆ ತೋರಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಅದಕ್ಕಿಂತಲೂ ಕೀಳುಮಟ್ಟದ ವರ್ತನೆ ಮಾಡಬೇಕಾಗುತ್ತದೆ ಎಂದು ಮಹಾವೀರ ಹೆಗ್ಡೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬೋಳ ಜಯರಾಮ ಸಾಲ್ಯಾನ್, ರವೀಂದ್ರ ಮಡಿವಾಳ, ಸುಧೀರ್, ರೇಷ್ಮಾ ಶೆಟ್ಟಿ, ಸವೀತಾ ಕೋಟ್ಯಾನ್ ಉಪಸ್ಥಿತರಿದ್ದರು.
