• Home  
  • ಉಚ್ಚಿಲ ಸರಸ್ವತಿ ಮಂದಿರ ಶಾಲೆ (uchila Sarasvati mandira school) ಯಲ್ಲಿ ನಡೆದ ಮಕ್ಕಳ ಹಬ್ಬ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ, ಕಲಾಭೂಷಣ ಪ್ರಶಸ್ತಿ ಪ್ರದಾನ  
- ಶಾಲಾ ಕಾಲೇಜು

ಉಚ್ಚಿಲ ಸರಸ್ವತಿ ಮಂದಿರ ಶಾಲೆ (uchila Sarasvati mandira school) ಯಲ್ಲಿ ನಡೆದ ಮಕ್ಕಳ ಹಬ್ಬ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ, ಕಲಾಭೂಷಣ ಪ್ರಶಸ್ತಿ ಪ್ರದಾನ  

Share:  ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ, ಕಲಾಭೂಷಣ ಪ್ರಶಸ್ತಿ ಪ್ರಧಾನ  eMEDIA ಕನ್ನಡ Uchila – ಉಚ್ಚಿಲ; ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ (YUVAVAHINI)ಘಟಕದ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿಆಯೋಜಿಸಲಾದ ಮಕ್ಕಳ ಹಬ್ಬ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಶಸ್ತಿ 7ನೇ ತರಗತಿಯ ಆಯಿಷಾ ಶಮಾಗೆ ಕಲಾರತ್ನ, 2ನೇ ತರಗತಿಯ ಅಭಿಜ್ಞಾ ಎಸ್ ಆಚಾರ್ಯಗೆ  ಕಲಾಶ್ರೀ ಮತ್ತು 10ನೇ ತರಗತಿ ಸಮಥ್೯ ಆರ್ ಜೋಶಿಗೆ  […]

 ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ, ಕಲಾಭೂಷಣ ಪ್ರಶಸ್ತಿ ಪ್ರಧಾನ

 eMEDIA ಕನ್ನಡ

Uchila – ಉಚ್ಚಿಲ; ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ (YUVAVAHINI)ಘಟಕದ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿಆಯೋಜಿಸಲಾದ ಮಕ್ಕಳ ಹಬ್ಬ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಶಸ್ತಿ 7ನೇ ತರಗತಿಯ ಆಯಿಷಾ ಶಮಾಗೆ ಕಲಾರತ್ನ, 2ನೇ ತರಗತಿಯ ಅಭಿಜ್ಞಾ ಎಸ್ ಆಚಾರ್ಯಗೆ  ಕಲಾಶ್ರೀ ಮತ್ತು 10ನೇ ತರಗತಿ ಸಮಥ್೯ ಆರ್ ಜೋಶಿಗೆ  ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ (Vandana Rai) ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯು ಕನ್ನಡ ಶಾಲೆಗೆ ಮಹತ್ವ ನೀಡಿ, ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಅತ್ಯುನ್ನತ ಕಾರ್ಯ. ಬಂದ ಅವಕಾಶಗಳನ್ನು ಉಪಯೋಗಿಸಿ ಕೆಳ ಹಂತದಿಂದ ಮೇಲ್ಮಟ್ಟದವರೆಗೆ ಸಾಧಿಸಿ ಊರಿಗೆ ಕೀರ್ತಿ ತರುವ ಕಾರ್ಯ ಮಾಡಿ ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಘಟಕದ ಅಧ್ಯಕ್ಷರಾದ ಅಶ್ವಥ್ ಎಸ್ ವಹಿಸಿದ್ದರು.

ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ವಿದ್ಯಾ ರಾಕೇಶ್, ಎರ್ಮಾಳು ಬಡಾ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸಮಿತಿಯ (Brahma Baidarkala Garadi Bada) ಕೋಶಾಧಿಕಾರಿ ಸುಕೇಶ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಸಂಘಟನಾ ಕಾರ್ಯದರ್ಶಿಗಳಾದ ಉದಯ್ ಕಾವೂರು, ಕುಮಾರಿ ಯಶೋಧ, ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ, ಪಡುಬಿದ್ರಿ ಘಟಕದ ಕಲಾ ಮತ್ತು ಸಾಹಿತ್ಯ ನಿರ್ದೇಶಕರಾದ ಸಂತೋಷ್ ಕರ್ನಿರೆ (Santhosh Karnire) ಉಪಸ್ಥಿತರಿದ್ದರು.

ಪಡುಬಿದ್ರಿ ಘಟಕದ ಕಲಾ ಮತ್ತು ಸಾಹಿತ್ಯ ನಿರ್ದೇಶಕರಾದ ಸಂತೋಷ್ ಕರ್ನಿರೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿಧಿತ್ ಮತ್ತು ಪವಿತ್ರ ನಿರೂಪಿಸಿದರು. ಕಾರ್ಯದರ್ಶಿ ನಿಖಿಲ್ ಪೂಜಾರಿ ಪೂಜಾರಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.