• Home  
  •  ಉಡುಪಿ ನಾಲ್ವರ ಕೊಲೆ ಪ್ರಕರಣ;  ಆರೋಪಿ ಸೆರೆ,  ಹಲವಾರು ಆಯಾಮದಲ್ಲಿ ತನಿಖೆ ನಡೆಯುತ್ತಿದೆ: ಎಸ್ಪಿ ಡಾ. ಅರುಣ್‌ ಕುಮಾರ್‌ ಹೇಳಿಕೆ (Udupi muder case. Udupi SP Arun kumar briefing)
- ಅಪರಾಧ

 ಉಡುಪಿ ನಾಲ್ವರ ಕೊಲೆ ಪ್ರಕರಣ;  ಆರೋಪಿ ಸೆರೆ,  ಹಲವಾರು ಆಯಾಮದಲ್ಲಿ ತನಿಖೆ ನಡೆಯುತ್ತಿದೆ: ಎಸ್ಪಿ ಡಾ. ಅರುಣ್‌ ಕುಮಾರ್‌ ಹೇಳಿಕೆ (Udupi muder case. Udupi SP Arun kumar briefing)

Share: ಉಡುಪಿ ನಾಲ್ವರ ಕೊಲೆ ಪ್ರಕರಣ;  ಆರೋಪಿ ಸೆರೆ,  ಹಲವಾರು ಆಯಾಮದಲ್ಲಿ ತನಿಖೆ ನಡೆಯುತ್ತಿದೆ: ಎಸ್ಪಿ ಡಾ. ಅರುಣ್‌ ಕುಮಾರ್‌ ಹೇಳಿಕೆ ಉಡುಪಿ: ಉಡುಪಿಯ ಮಲ್ಪೆಯ ನೇಜಾರುವಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂದಿಸಿ ಮಹಾರಾಷ್ಟ್ರ ಮೂಲದ ಪ್ರವೀಣ್ ಅರುಣ್ ಚೌಗಲೆ (Praveen Arun Chaugule) ಯನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಬುಧವಾರ ಬೆಳಿಗ್ಗೆ ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್  ಕುಮಾರ್‌ ಹೇಳಿದ್ದಾರೆ.  ಉಡುಪಿ ಜಿಲ್ಲೆ ಮತ್ತು […]

ಉಡುಪಿ ನಾಲ್ವರ ಕೊಲೆ ಪ್ರಕರಣ;  ಆರೋಪಿ ಸೆರೆ,  ಹಲವಾರು ಆಯಾಮದಲ್ಲಿ ತನಿಖೆ ನಡೆಯುತ್ತಿದೆ: ಎಸ್ಪಿ ಡಾ. ಅರುಣ್‌ ಕುಮಾರ್‌ ಹೇಳಿಕೆ

ಉಡುಪಿ: ಉಡುಪಿಯ ಮಲ್ಪೆಯ ನೇಜಾರುವಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂದಿಸಿ ಮಹಾರಾಷ್ಟ್ರ ಮೂಲದ ಪ್ರವೀಣ್ ಅರುಣ್ ಚೌಗಲೆ (Praveen Arun Chaugule) ಯನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಬುಧವಾರ ಬೆಳಿಗ್ಗೆ ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್  ಕುಮಾರ್‌ ಹೇಳಿದ್ದಾರೆ.

 ಉಡುಪಿ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಪೊಲೀಸರ ಸಹಕಾರದಿಂದ ಪ್ರವೀಣ್ ಅರುಣ್ ಚೌಗಲೆ ಯನ್ನು ವಶಕ್ಕೆ ಪಡೆದಿದ್ದೇವೆ. ಟೆಕ್ನಿಕಲ್ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ ಮೇರೆಗೆ ಉಡುಪಿಗೆ ಕರೆದುಕೊಂಡ ಬಂದಿದ್ದೇವೆ. ಸಂಜೆಯೊಳಗೆ ತನಿಖೆ ಮಾಡಿದಾಗ ಪೂರ್ಣ ಚಿತ್ರಣ ಸಿಗಲಿದೆ ಎಂದರು.

ಪ್ರವೀಣ್ ಅರುಣ್ ಚೌಗಲೆ ಸಿ ಆರ್ ಪಿಎಫ್ ಎಂದು ಸುದ್ದಿವಾಹಿನಿಯಲ್ಲಿ ಬರುತ್ತದೆ. ಆದರೆ ಆತ  ಸಿವಿಲ್ ಪೊಲೀಸ್ ನಲ್ಲಿ ಇದ್ದಾನೆ ಎಂಬ ಮಾಹಿತಿ ಇದೆ. ಹಲವಾರು ಶಂಕಿತರ ವಿಚಾರಣೆ ಮಾಡುತ್ತಿದ್ದೇವೆ.

 ಜಿಲ್ಲೆಯ ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಮಾಡಿದ್ದೇವೆ.  ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ ಎಂದೂ ಎಸ್ಪಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.