• Home  
  • BIG BREAKING ಉಡುಪಿ: ನಾಲ್ವರ ಹತ್ಯೆ ಪ್ರಕರಣ: ಆರೋಪಿಯಿಂದ ತಪ್ಪೊಪ್ಪಿಗೆ- ಉಡುಪಿ ಎಸ್ಪಿ ಸುದ್ದಿಗೋಷ್ಠಿ (Udupi SP DR Arunkumar PRESS MEET)
- ಅಪರಾಧ - ವಿಡಿಯೋ

BIG BREAKING ಉಡುಪಿ: ನಾಲ್ವರ ಹತ್ಯೆ ಪ್ರಕರಣ: ಆರೋಪಿಯಿಂದ ತಪ್ಪೊಪ್ಪಿಗೆ- ಉಡುಪಿ ಎಸ್ಪಿ ಸುದ್ದಿಗೋಷ್ಠಿ (Udupi SP DR Arunkumar PRESS MEET)

Share: ಉಡುಪಿ: ನಾಲ್ವರ ಹತ್ಯೆ ಪ್ರಕರಣ: ಆರೋಪಿಯಿಂದ ತಪ್ಪೊಪ್ಪಿಗೆ- ಉಡುಪಿ ಎಸ್ಪಿ ಸುದ್ದಿಗೋಷ್ಠಿ ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ  14ದಿನ (ನ.28 ರವರೆಗೆ) ಪೊಲೀಸ್ ಕಸ್ಟಡಿ   ಉಡುಪಿ:  ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎಸ್ .ಪಿ ಡಾ. ಅರುಣ್ ಕೆ. ಸುದ್ದಿಗೋಷ್ಟಿ ನಡೆಸಿದ್ದು ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.  ಕೊಲೆಗೆ ಕಾರಣ ಏನು ಎಂಬುದನ್ನು ವಿಚಾರಣೆಯಲ್ಲಿ ಪಡೆದುಕೊಳ್ಳುತ್ತೇವೆ. ಕೊಲೆಗೆ ಮೂರ್ನಾಲ್ಕು ಕಾರಣಗಳು ಇರುವ […]

UDUPI MURDER: ACCUSE PRAVIN CHAUGLE 15 DAYS POLICE CUSTODY

ಉಡುಪಿ: ನಾಲ್ವರ ಹತ್ಯೆ ಪ್ರಕರಣ: ಆರೋಪಿಯಿಂದ ತಪ್ಪೊಪ್ಪಿಗೆ- ಉಡುಪಿ ಎಸ್ಪಿ ಸುದ್ದಿಗೋಷ್ಠಿ

ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ  14ದಿನ (ನ.28 ರವರೆಗೆ) ಪೊಲೀಸ್ ಕಸ್ಟಡಿ  

ಉಡುಪಿ:  ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎಸ್ .ಪಿ ಡಾ. ಅರುಣ್ ಕೆ. ಸುದ್ದಿಗೋಷ್ಟಿ ನಡೆಸಿದ್ದು ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

 ಕೊಲೆಗೆ ಕಾರಣ ಏನು ಎಂಬುದನ್ನು ವಿಚಾರಣೆಯಲ್ಲಿ ಪಡೆದುಕೊಳ್ಳುತ್ತೇವೆ. ಕೊಲೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಗಳಿವೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಅಯ್ನಾಝ್ ಎಂಬಾಕೆಯನ್ನು ಕೊಲೆ ಮಾಡುವುದಾಗಿತ್ತು. ಅಯ್ನಾಝ್ ಮತ್ತು ಪ್ರವೀಣ್ ಚೌಗುಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯ ನಾಶ ಮಾಡುವ ಸಲುವಾಗಿ ಎಲ್ಲರನ್ನೂ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಹೇಳಿದ್ದಾರೆ.

 ಆರೋಪಿ ಪ್ರವೀಣ್ ಚೌಗುಲೆಗೆ ಮದುವೆಯಾಗಿತ್ತು. ಸದ್ಯ ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮಾಡಿ ಬಂಧಿಸಿದ್ದೇವೆ. ಕೋರ್ಟ್ ಗೆ ಇವತ್ತೇ ಹಾಜರು ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಒಂದನೇ ಹೆಚ್ಚುವರಿ ನ್ಯಾಯಾಯಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಹಾಜರು ಪಡಿಸಲಾಯಿತು.

 ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ  14ದಿನ (ನ.೨೮ರವರೆಗೆ) ಪೊಲೀಸ್ ಕಸ್ಟಡಿ ನೀಡಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.