
ದೇಶ ವಿದೇಶಗಳಲ್ಲಿ ಬಂಟರ ಕೊಡುಗೆ ಅನನ್ಯ: ಉದ್ಯಮಿ ಕೆ ಪ್ರಕಾಶ್ ಶೆಟ್ಟಿ
ಬಂಟ್ವಾಳ: ದೇಶ, ವಿದೇಶಗಳಲ್ಲಿ ಬಂಟರ ಕೊಡುಗೆ ಅನನ್ಯವಾಗಿದ್ದು, ಕೃಷಿ ಪರಂಪರೆಯಿಂದ ಬಂದ ಬಂಟ ಸಮುದಾಯ ಪವಿತ್ರವಾದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಈ ನಿಟ್ಟಿನಲ್ಲಿ ಬಂಟ್ವಾಳ ಬಂಟರ ಸಂಘ ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವರವರ ನೇತೃತ್ವದಲ್ಲಿ ದೀಪಾವಳಿ ಹಬ್ಬವನ್ನು ಉತ್ತಮವಾಗಿ ನಡೆಸಿದ್ದಾರೆ ಎಂದು ಎಂಆರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಬಂಟರ ಸಂಘ ಬಂಟವಾಳ ತಾಲೂಕು (ರಿ) ಯುವ ವಿಭಾಗದ ಆಶ್ರಯದಲ್ಲಿ ಬಂಟ್ವಾಳ ಬಂಟರ ಭವನದಲ್ಲಿ ನಡೆದ ಬೆಳ್ಳಿಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಪ್ರಯುಕ್ತ “ಬೊಲ್ಪುದ ಐಸಿರಿ- 2” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ (Wold Bunts Association President Aikala Harish Shetty) ಅವರು ಮಾತನಾಡಿ,
ಬಂಟ್ವಾಳ ಬಂಟರ ಯುವ ವಿಭಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸಿ, ಸಂಪ್ರದಾಯದಂತೆ ಕಾರ್ಯಕ್ರಮವನ್ನು ನಡೆಸಿರುವುದು ಶ್ಲಾಘನೀಯವಾಗಿದೆ ಎಂದರು.
ಎಲ್ಲರೂ ಒಟ್ಟಾಗಿ ಸಮುದಾಯದ ಏಳಿಗೆಗಾಗಿ ಕೈ ಜೋಡಿಸಿ ಕೆಲಸ ಮಾಡಬೇಕೆಂದು ಮುಂಬಯಿ ಹೇರಂಬ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ (Sadashiva Shetty, HERAMBA, Mumbai)ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ (Ajitkumar Rai Maladi), ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು DK MP Nlinkumar Katil), ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು (MLA Rajesh Naik, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ ದೇವಿ ಪ್ರಸಾದ್ ಶೆಟ್ಟಿ ಬೆಳಪು DR Deviprasad Shetty), ಮಾಜಿ ಸಚಿವ ಬಿ. ರಮಾನಾಥ ರೈ EX Minister Ramanatha Rai,, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು (Mayor Sudir Shetty), ಶಾಸಕ ಅಶೋಕ್ ಕುಮಾರ್ ರೈ (MLA Ashok Kumar Rai), ಉದಯ ಶೆಟ್ಟಿ ಮುನಿಯಾಲು,
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಜಗನ್ನಾಥ ಚೌಟ, ಡಾ. ಪ್ರಶಾಂತ್ ಮಾರ್ಲ, ಲೋಕೇಶ್ ಶೆಟ್ಟಿ ಕುಳ, ರಂಜನ್ ಶೆಟ್ಟಿ ಅರಳ, ಪ್ರತಿಭಾ ರೈ, ರಮಾ ಭಂಡಾರಿ, ಗೋಕುಲ್ ಭಂಡಾರಿ, ಕರುಣ್ ಶೆಟ್ಟಿ, ದೀಪಕ್ ರೈ, ಶುಭಕರ್ ಶೆಟ್ಟಿ, ವಿಕ್ರಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ ಎ. ಸದಾನಂದ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ಕೆ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ಸ್ವಾಗತಿಸಿದರು. ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಹಾಯಧನ ವಿತರಿಸಲಾಯಿತು.
ಭವಿಷ್ ಶೆಟ್ಟಿ ಕೊಡಿಬೆಟ್ಟು ಸನ್ಮಾನಪತ್ರ ವಾಚಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಹಾಸ್ಯ, ಸಂಗೀತ, ನೃತ್ಯ ಪ್ರದರ್ಶನ ನಡೆಯಿತು.
ಬಳಿಕ ಸಾಮೂಹಿಕ ಬಲೀಂದ್ರ ಪೂಜೆ, ಗೋಪೂಜೆ ಬಳಿಕ ಸುಡುಮದ್ದು ಪ್ರದರ್ಶನ ನಡೆಯಿತು.

