ಉಡುಪಿ ಸಮೀಪದ ನೇಜಾರುವಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ತನಿಖೆ ಬಹುತೇಕ ಪೂರ್ಣ, ಆರೋಪಿಗೆ ನ್ಯಾಯಾಂಗ ಬಂಧನ ಎಸ್ಪಿ, ಹೇಳಿಕೆ
(Udupi) ಉಡುಪಿ: ಉಡುಪಿ ಸಮೀಪದ ನೇಜಾರುವಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಆರೋಪಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ ನಾಲ್ಕರ ತನಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್‌ರವರು ಗುರುವಾರ ತನಿಖೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಮಾಹಿತಿ ನೀಡಿದರು.
ಕೊಲೆಯಾದ ಗಗನಸಖಿ ಅಯ್ನಾಝ್ ಮತ್ತು ಆರೋಪಿ ಚೌಗಲೆ ಕಳೆದ ಎಂಟು ತಿಂಗಳಿನಿಂದ ಸ್ನೇಹಿತರಾಗಿದ್ದರು. ಚೌಗಲೆ ಅಲ್ಲೇ ಕ್ಯಾಬಿನ್ ಕ್ರೂ ಆಗಿದ್ದ. ಅಯ್ನಾಝ್ ಗೆ ಸಹಾಯ ಮಾಡುತ್ತಿದ್ದ. ಆಕೆ ಮಂಗಳೂರಿನಲ್ಲಿ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಳು. ಆರೋಪಿ ತನ್ನ ಸ್ಕೂಟರ್ ಅಯ್ನಾಝ್ ಬಳಕೆಗೆ ನೀಡಿದ್ದ. ಹೀಗೆ ಸಣ್ಣ ಪುಟ್ಟ ಸಹಾಯವನ್ನು ಸ್ನೇಹಿತೆ ಎಂಬ ಕಾರಣಕ್ಕೆ ಮಾಡುತ್ತಿದ್ದ.
ಅದರೆ ತಿಂಗಳಿನಿಂದ ಅಯ್ನಾಝ್ ಆತನನ್ನು ಅವಾಯ್ಡ್ ಮಾಡುತ್ತಾಳೆ. ಇದೇ ದ್ವೇಷದಿಂದ ಆಕೆಯನ್ನು ಕೊಲೆ ಮಾಡಲು ಸ್ಕೆಚ್ ಹಾಕುತ್ತಾನೆ. ಒಂದು ಆಪ್ ಮೂಲಕ ಆಯ್ನಾಝ್ ಮನೆಯನ್ನು ಪ್ರವೀಣ್ ಹುಡುಕಿದ್ದಾನೆ. ಆಪ್ ಲೊಕೇಶನ್ ಮೂಲಕ ಆರೋಪಿ ಮನೆಗೆ ಬಂದಿದ್ದಾನೆ, ಆದರೆ ಆರೋಪಿ ಕೃತ್ಯಕ್ಕೆ ಮೊದಲು ಮನೆಗೆ ಬಂದಿರಲಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ನೇರವಾಗಿ ಮನೆಗೆ ಬಂದವ , ಆಕೆಯನ್ನು ಕೊಲ್ಲುವಾಗ ಅಡ್ಡ ಬಂದ ತಾಯಿ ಮತ್ತು ಮೂವರನ್ನು ಕೊಲೆ ಮಾಡುತ್ತಾನೆ.
ಎಂಟು ತಿಂಗಳಿಂದ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಆದರೆ ತಿಂಗಳಿಂದ ಅಯ್ನಾಝ್ ಸರಿಯಾಗಿ ಚೌಗಲೆ ಜೊತೆ ಮಾತನಾಡುತ್ತಿರಲಿಲ್ಲ.ಇದನ್ನು ಆತ ಸಹಿಸಿರಲಿಲ್ಲ.
ಪಾಸೆಸಿವ್ ನೆಸ್ ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪ್ರವೀಣ್, ಆರಂಭದಲ್ಲಿ ಅಯ್ನಾಝ್ ಮೇಲೆ ಮೊದಲ ಅಟ್ಯಾಕ್ ಮಾಡುತ್ತಾನೆ. ನಂತರ ಹಸೀನಾ, ಅಫ್ನಾನ್, ಆಸಿಂಗೆ ಚಾಕುವಿನಿಂದ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಬೇರೆ ಬೇರೆ ವಾಹನದಲ್ಲಿ ದ.ಕ ಜಿಲ್ಲೆಗೆ ಪರಾರಿಯಾಗಿದ್ದಾನೆ.
ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿ ತವರು ಮನೆಗೆ ಹೋಗಿದ್ದಾನೆ.
“ನಾವು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್ ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ.
2007ರಲ್ಲಿ ಪೂನಾ ಪೊಲೀಸ್ ಆಗಿದ್ದವ, ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದಾನೆ. ಕೊಲೆ ಸಂದರ್ಭ ಅಮಲು ಪದಾರ್ಥ ಸೇವನೆ ಮಾಡಿದ್ದನೋ ಎಂಬ ಬಗ್ಗೆ ಮೆಡಿಕಲ್ ರಿಪೋರ್ಟ್ ಬರಲಿದೆ ಎಂದು ಎಸ್ಪಿ ಹೇಳಿದ್ದಾರೆ.
