• Home  
  • ಶಂಕರಪುರ ದ್ವಾರಕಾಮಾಯಿ ಕ್ಷೇತ್ರದಲ್ಲಿ ಡಿ.3-ಡಿ.4ರಂದು ಕಾಲಭೈರವ ಸ್ವಾಮಿ ಪ್ರತಿಷ್ಠೆ, ಗುರುವಂದನಾ ಕಾರ್ಯಕ್ರಮ (Shankarapura Sri Dhwarakamyi Mandira Trust)
- ಕರಾವಳಿ - ವಿಡಿಯೋ

ಶಂಕರಪುರ ದ್ವಾರಕಾಮಾಯಿ ಕ್ಷೇತ್ರದಲ್ಲಿ ಡಿ.3-ಡಿ.4ರಂದು ಕಾಲಭೈರವ ಸ್ವಾಮಿ ಪ್ರತಿಷ್ಠೆ, ಗುರುವಂದನಾ ಕಾರ್ಯಕ್ರಮ (Shankarapura Sri Dhwarakamyi Mandira Trust)

Share: ಶಂಕರಪುರ ದ್ವಾರಕಾಮಾಯಿ ಕ್ಷೇತ್ರದಲ್ಲಿ ಡಿ.3-ಡಿ.4ರಂದು ಕಾಲಭೈರವ ಸ್ವಾಮಿ ಪ್ರತಿಷ್ಠೆ, ಗುರುವಂದನಾ ಕಾರ್ಯಕ್ರಮ (Katapadi)  ಕಟಪಾಡಿ, ನ.25: ಶಂಕರಪುರ ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರುವಂದನಾ ಕಾರ್ಯಕ್ರಮ  ಡಿ.3 ಮತ್ತು ಡಿ.ರಂದು ಜರಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ (Sai Eshwar Guruji)ಹೇಳಿದರು. ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಶಿಲಾಮಯ ಗರ್ಭಗುಡಿಯಲ್ಲಿ ಪಾನಪ್ರಿಯ ಕಾಲಭೈರವ ಸ್ವಾಮಿ ಪ್ರತಿಷ್ಠೆಯು ಗುರುವರ್ಯರಾದ ಶ್ರೀ ಪ್ರವೀಣ್ […]

shankarapura dhwarakamayi temple

ಶಂಕರಪುರ ದ್ವಾರಕಾಮಾಯಿ ಕ್ಷೇತ್ರದಲ್ಲಿ ಡಿ.3-ಡಿ.4ರಂದು ಕಾಲಭೈರವ ಸ್ವಾಮಿ ಪ್ರತಿಷ್ಠೆ, ಗುರುವಂದನಾ ಕಾರ್ಯಕ್ರಮ

(Katapadi)  ಕಟಪಾಡಿ, ನ.25: ಶಂಕರಪುರ ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರುವಂದನಾ ಕಾರ್ಯಕ್ರಮ  ಡಿ.3 ಮತ್ತು ಡಿ.ರಂದು ಜರಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ (Sai Eshwar Guruji)ಹೇಳಿದರು.

ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಶಿಲಾಮಯ ಗರ್ಭಗುಡಿಯಲ್ಲಿ ಪಾನಪ್ರಿಯ ಕಾಲಭೈರವ ಸ್ವಾಮಿ ಪ್ರತಿಷ್ಠೆಯು ಗುರುವರ್ಯರಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರವರ ಉಪಸ್ಥಿತಿಯಲ್ಲಿ ಮುಂಬಯಿಯ ವೇ| ಮೂ| ದೇವದಾಸ್ ತಂತ್ರಿ ಮುಂಬಯಿ ನೇತೃತ್ವದಲ್ಲಿ ಜರಗಲಿದೆ.  

ಈ ಸಮಾರಂಭದಲ್ಲಿ ದೇಶದ ನಾನಾ ರಾಜ್ಯಗಳಿಂದ 110ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ. ಡಿ.೩ರಂದು ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 11-30ಕ್ಕೆ ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಮಠದ ಮಹತ್ವದ ಯೋಜನೆಯಾದ ಸಂತ ಆಶ್ರಯಧಾಮಕ್ಕೆ ಸಾಧು ಸಂತರು ಭಗವಾಧ್ವಜವನ್ನು ಇರಿಸಿ ದೀಪ ಬೆಳಗಿಸಿ ಪ್ರಾರ್ಥಿಸಲಿದ್ದಾರೆ.

 ದ್ವಾರಕಾಮಾಯಿ ಮಠದಲ್ಲಿ ಮಧ್ಯಾ 3-30ಕ್ಕೆ ಅಖಿಲ ಭಾರತೀಯ ಸಂತ ಸಮಿತಿಯ ಪ್ರಾಂತ್ಯ ಸಭೆ ನಡೆಯಲಿದೆ. ಸಂಜೆ 5ಕ್ಕೆ ಸಾಲ್ಮರ ಶಂಕರಪುರದಿಂದ ಕಾಲಭೈರವ ಸ್ವಾಮಿ ಪ್ರತಿಮೆ ಹಾಗೂ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು

ಡಿ. ೪ರಂದು ಬೆಳಿಗ್ಗೆ ಪ್ರತಿಷ್ಠೆ ಕಲಶಾಭಿಷೇಕ, 10-30ಕ್ಕೆ ಗುರುವಂದನೆ, ಮದ್ಯಾಹ್ನ 12-30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಈ ಪುಣ್ಯ ಕಾರ‍್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಕ್ಷೇತ್ರದ ಸರ್ವಶಕ್ತಿ ಹಾಗೂ ಕಾಲಭೈರವ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದರು.

ಸುದ್ದಿಗೋಷ್ಟಿಯಲ್ಲಿ ಟ್ರಸ್ಟಿ ಗುರೂಜಿ ವಿಶ್ವನಾಥ ಸುವರ್ಣ, ಗೌರವ ಅಧಕ್ಷರಾದ ಸುಧಾಕರ ಶೆಟ್ಟಿ, ಕ್ಷೇತ್ರದ ಮಾರ್ಗದರ್ಶಕರಾದ ಗೀತಾಂಜಲಿ ಎಂ. ಸುವರ್ಣ, ವೀಣಾ ಎಸ್. ಶೆಟ್ಟಿ, ವಿಜಯ್ ಕುಂದರ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.