• Home  
  • ಸಿಎಂ ಹಿಜಾಬ್‌ ನಿಷೇಧ ವಾಪಸ್‌ ಹೇಳಿಕೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ (CM Hijab Ban withdrawal Statement : Udupi MLA Yashpal Suvarna outraged)
- ರಾಜಕೀಯ - ವಿಡಿಯೋ

ಸಿಎಂ ಹಿಜಾಬ್‌ ನಿಷೇಧ ವಾಪಸ್‌ ಹೇಳಿಕೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ (CM Hijab Ban withdrawal Statement : Udupi MLA Yashpal Suvarna outraged)

Share: ‌ ಸಿಎಂ ಹಿಜಾಬ್‌ ನಿಷೇಧ ವಾಪಸ್‌ ಹೇಳಿಕೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ಉಡುಪಿ: ರಾಜ್ಯ ಸರ್ಕಾರ ತಾನು ಚುನಾವಣೆಯಲ್ಲಿ ನೀಡಿದ ಉಚಿತ ಭಾಗ್ಯಗಳನ್ನು ಈಡೇರಿಸಲು ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramayya) ಹಿಜಾಬ್ ನಿಷೇಧ ವಾಪಾಸಾತಿಯ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಇಂದು ಉಡುಪಿಯಲ್ಲಿ ಹೇಳಿದ್ದಾರೆ.  ಹಿಜಾಬ್ ನಿಷೇಧ ವಾಪಸ್ ಪಡೆಯಲು ಆದೇಶ ಹೊರಡಿಸಿದರೆ ರಾಜ್ಯ ಸರಕಾರ ಜೇನು ಗೂಡಿಗೆ ಕೈ […]

‌

ಸಿಎಂ ಹಿಜಾಬ್‌ ನಿಷೇಧ ವಾಪಸ್‌ ಹೇಳಿಕೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ

ಉಡುಪಿ: ರಾಜ್ಯ ಸರ್ಕಾರ ತಾನು ಚುನಾವಣೆಯಲ್ಲಿ ನೀಡಿದ ಉಚಿತ ಭಾಗ್ಯಗಳನ್ನು ಈಡೇರಿಸಲು ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramayya) ಹಿಜಾಬ್ ನಿಷೇಧ ವಾಪಾಸಾತಿಯ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಇಂದು ಉಡುಪಿಯಲ್ಲಿ ಹೇಳಿದ್ದಾರೆ.

 ಹಿಜಾಬ್ ನಿಷೇಧ ವಾಪಸ್ ಪಡೆಯಲು ಆದೇಶ ಹೊರಡಿಸಿದರೆ ರಾಜ್ಯ ಸರಕಾರ ಜೇನು ಗೂಡಿಗೆ ಕೈ ಹಾಕಿದಂತೆ. ಈಗಾಗಲೇ ಶಾಲಾ ಅಭಿವೃದ್ದಿ ಕಾರ್ಯಗಳಿಗೆ ಅನುದಾನ, ಶಿಕ್ಷಕರ ನೇಮಕಾತಿ ಸಹಿತ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿರುವ ಸರಕಾರ, ಈ ಹೇಳಿಕೆಯ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಲು ಮುಂದಾಗಿದೆ.

ಮುಖ್ಯಮಂತ್ರಿಗಳ ಹೇಳಿಕೆಯಿಂದ ವಿದ್ಯಾರ್ಥಿಗಳ ನಡುವಿನಲ್ಲಿ ಸಂಘರ್ಷ ಸೃಷ್ಟಿಗೆ ಅವಕಾಶ ನೀಡಿದಂತಾಗಿದೆ. ಮತೀಯವಾದಿ ಶಕ್ತಿಗಳ ಓಲೈಕೆಗಾಗಿ ಸಿದ್ದರಾಮಯ್ಯ ರವರು ಮುಂದಾಗಿರುವುದು ದುರದೃಷ್ಟಕರ ಎಂದು ಹೇಳಿದ ಯಶ್ಪಾಲ್‌ ಸುವರ್ಣ, ಸರಕಾರ ಈ ಕೂಡಲೇ ಹಿಜಾಬ್ ನಿಷೇಧ ಹಿಂಪಡೆಯುವ ಚಿಂತನೆಯನ್ನು ತಕ್ಷಣ ಕೈಬಿಟ್ಟು ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಸುಗಮ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ವಾತಾವರಣ ಕಲ್ಪಿಸಲು ಮುಂದಾಗಲಿ. ತಪ್ಪಿದಲ್ಲಿ ಈ ಬಗ್ಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.