ರಾಷ್ಟ್ರೀಯ ಅಗ್ನಿಶಾಮಕ ದಳ ಕ್ರೀಡಾಕೂಟ : ಉಡುಪಿ ಕುರ್ಕಾಲಿನ ಆಶ್ವಿನ್ ಸನಿಲ್ ಗೆ ಚಿನ್ನ
(Gujarath)ಗುಜರಾತ್: ಗುಜರಾತಿನ ಅಹ್ಮದಾ ಬಾದ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಗ್ನಿಶಾಮಕ ದಳದ ಕ್ರೀಡಾಕೂಟದಲ್ಲಿ ಉಡುಪಿಯ ಅಶ್ವಿನ್ ಸನಿಲ್ ಚಿನ್ನದ ಪದಕ ಪಡೆದು ಉಡುಪಿಗೆ ಹೆಮ್ಮೆ ತಂದಿದ್ದಾರೆ.
ರಾಜ್ಯದ ಪರವಾಗಿ ಭಾಗವಹಿಸಿದ ಆಶ್ವಿನ್ ಸನಿಲ್, ನೂರು ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ತನ್ನದಾಗಿಸಿದ್ದಾರೆ.
ಮುಂದಿನ ಸೆಪ್ಟಂಬರ್ ತಿಂಗಳಿನಲ್ಲಿ ಡೆನ್ಮಾರ್ಕ್ ದೇಶದಲ್ಲಿ ನಡೆಯಲಿರುವ ಹದಿನೈದನೇ ಅಂತರಾಷ್ಟ್ರೀಯ ಮಟ್ಟದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಶ್ವಿನ್ ಸನಿಲ್ ಅಯ್ಕೆಯಾಗಿದ್ದಾರೆ.
ಉಡುಪಿಯ ಕುರ್ಕಾಲು ಗ್ರಾಮದವರಾದ ಅಶ್ವಿನ್ ಸನಿಲ್ ಉಡುಪಿ ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

