• Home  
  • ಬನ್ನಂಜೆ : ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ (Bannanje: Scolorship program from Narayana Guru Vidhyanidhi Trust)
- ಕರಾವಳಿ

ಬನ್ನಂಜೆ : ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ (Bannanje: Scolorship program from Narayana Guru Vidhyanidhi Trust)

Share: ಬನ್ನಂಜೆ : ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ  (Udupi) ಉಡುಪಿ: ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ನ 2024ನೇ   ವಿದ್ಯಾರ್ಥಿ ವೇತನ ಕಾರ್ಯಕ್ರಮವು ಬನ್ನಂಜೆ ಬಿಲ್ಲವ ಸಂಘದ  ಶಿವಗಿರಿ ಸಭಾಭವನದಲ್ಲಿ‌ ಶನಿವಾರ ಸಂಜೆ ನಡೆಯಿತು.  ಕಾರ್ಯಕ್ರಮದಲ್ಲಿ ಸುಮಾರು 114 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿದ   ಶಿಕ್ಷಕ  ದೀಪಕ್  ಕೆ ಬೀರಾ (Deepak K Beera)ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕದ ಜ್ಞಾನ‌ ಇದೆ. ಅದರೆ,  ಸಾಮಾಜಿಕ‌ ಜ್ಞಾನದ […]

ಬನ್ನಂಜೆ : ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

 (Udupi) ಉಡುಪಿ: ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ನ 2024ನೇ   ವಿದ್ಯಾರ್ಥಿ ವೇತನ ಕಾರ್ಯಕ್ರಮವು ಬನ್ನಂಜೆ ಬಿಲ್ಲವ ಸಂಘದ  ಶಿವಗಿರಿ ಸಭಾಭವನದಲ್ಲಿ‌ ಶನಿವಾರ ಸಂಜೆ ನಡೆಯಿತು.

 ಕಾರ್ಯಕ್ರಮದಲ್ಲಿ ಸುಮಾರು 114 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿದ   ಶಿಕ್ಷಕ  ದೀಪಕ್  ಕೆ ಬೀರಾ (Deepak K Beera)ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕದ ಜ್ಞಾನ‌ ಇದೆ. ಅದರೆ,  ಸಾಮಾಜಿಕ‌ ಜ್ಞಾನದ ಕೊರತೆ ಇದೆ. ಹೆತ್ತವರು ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಸಾಮಾಜಿಕ ಜ್ಞಾನ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ.

 ಉಡುಪಿಯ ಬಿಲ್ಲವ ಸಂಘ ಹಲವಾರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿಗಳು ವಿದ್ಯೆಯ ಮೂಲಕ ಸಬಲೀಕರಣವಾಗಬೇಕು ಎನ್ನುವ ಆಶಯ ಸಂಘದ್ದಾಗಿದೆ. ಶ್ರೀ ನಾರಾಯಣ ಗುರುಗಳ ಅದರ್ಶಗಳನ್ನು ನಾವು ಅಳವಡಿಸಕೊಳ್ಳಬೇಕು. ವಿದ್ಯಾರ್ಥಿ ವೇತನಗಳನ್ನು ಪಡೆದು ಕೊಂಡ ವಿದ್ಯಾರ್ಥಿಗಳು  ಇದರ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಏರಬೇಕು. ಸಂಘದ ಪರ ಅಭಿಮಾನವನ್ನಿಟ್ಟುಕೊಂಡು ಭವಿಷ್ಯದ  ದಿನದಲ್ಲಿ ಇನ್ನಷ್ಟು ಮಕ್ಕಳಿಗೆ ಸಹಾಯ ಮಾಡುವಂತೆ ನೀವು ಕೂಡ ಜೋಡಿಸುವಂತೆ ದೀಪಕ್‌ ಬೀರಾ ಕರೆ ನೀಡಿದರು.

 ಈ‌ ಸಂದರ್ಭದಲ್ಲಿ ದೀಪಕ್ ಕೆ ಬೀರಾರವರನ್ನು ಟ್ರಸ್ಟ್‌ ವತಿಯಿಂದ ಗೌರವಿಸಲಾಯಿತು.

ಬನ್ನಂಜೆ ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ಮಾಧವ ಬನ್ನಂಜೆ (Madhava Bannanje)ಅಧ್ಯಕ್ಷತೆ ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಗೌ ಪ್ರ ಕಾರ್ಯದರ್ಶಿ ಶಶಿಧರ ಎಂ ಅಮೀನ್, ಉಪಾಧ್ಯಕ್ಷರಾದ ಸದಾನಂದ ಪೂಜಾರಿ, ಕೋಶಾಧಿಕಾರಿ ಕೆ. ಗೋಪಾಲ ಪೂಜಾರಿ, ಸದಸ್ಯರುಗಳಾದ ಆನಂದ ಪೂಜಾರಿ, ನಾರಾಯಣ ಜತ್ತನ್, ಬಿ ಬಿ ಪೂಜಾರಿ, ಕೃಷ್ಣಪ್ಪ ಅಂಚನ್, ಉದಯ ಪೂಜಾರಿ, ಪೂರ್ಣಿಮಾ ಅಂಚನ್, ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ಸದಸ್ಯರಾದ ಸದಾನಂದ ಅಮೀನ್, ಲಕ್ಷ್ಮಣ ಪೂಜಾರಿ, ದಯಾನಂದ ಬನ್ನಂಜೆ, ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.

 ಶಶಿಧರ್ ಎಂ ಅಮೀನ್ ಸ್ವಾಗತಿಸಿದರು.

ಮಾಧವ ಬನ್ನಂಜೆ ಸ್ವಾಗತಿಸಿ ಪ್ರಸ್ತಾವನೆ ಗೈದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

 ಸದಾನಂದ ಅಮೀನ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.