(karkala theem park) ಕಾರ್ಕಳ ಥೀಂ ಪಾರ್ಕಿನಲ್ಲಿ ಪರಶುರಾಮನ ಕಂಚಿನ ಪ್ರತಿಮೆ: ಬ್ರಹ್ಮಾಂಡ ಬಯಲು
ಕಾರ್ಕಳ : ಬೈಲೂರು ಪರಶುರಾಮ ಥೀಮ್ ಪಾರ್ಕಿನಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿ ಪೈಭರ್ ಪ್ರತಿಮೆ ನಿರ್ಮಿಸಿ ಶಾಸಕ ಸುನೀಲ್ ಕುಮಾರ್ (mla Suneel kumar) ಜನತೆಗೆ ನಂಬಿಕೆ ದ್ರೋಹವೆಸಗಿದ್ದಾರೆ. ಬೈಲೂರು ಉಮಿಕಲ್ ಬೆಟ್ಟದಲ್ಲಿ ಪುನರಪಿ ಪರಶುರಾಮನ ಕಂಚಿನ ಪ್ರತಿಮೆಯನ್ನೇ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ (muniyalu udaya kumar Shetty) ಇಂದು ಸರಕಾರವನ್ನು ಆಗ್ರಹಿಸಿದ್ದಾರೆ.
(ದ್ರೋನ್ ಕೆಮೆರಾದ ಮೂಲಕ ಬೈಲೂರು ಪರಶುರಾಮ ಥೀಮ್ ಪಾರ್ಕಿನ ಛಾಯಾ ಚಿತ್ರ ಮಾಡಲಾಗಿದೆ)
ಬೈಲೂರು ಪರಶುರಾಮ ಥೀಮ್ ಪಾರ್ಕ್ ಪರಿಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಚಿನ ಮೂರ್ತಿಯನ್ನು ಮಾಡಲು ಕನಿಷ್ಠ 2ವರ್ಷವಾದರೂ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆದವರು ನಿರ್ಮಿತಿ ಕೇಂದ್ರದವರಿಗೆ ನೀಡಿದ್ದು, ನಿರ್ಮಿತಿ ಕೇಂದ್ರದವರು ಅದನ್ನು ಮಾಡುವುದು ಯೋಗ್ಯವಲ್ಲ. ಅದನ್ನು ಬದಲಾಯಿಸಿ ಸತ್ಯಶೋಧನಾ ಸಮಿತಿಯ ಉಸ್ತುವಾರಿಯಲ್ಲಿ ಶಾಶ್ವತ ಯೋಜನೆ ರೂಪಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರ ಶಾಸಕರನ್ನು ಒಳಗೊಂಡ ಸಮಿತಿಯ ನೇತೃತ್ವದಲ್ಲಿ ನಾಡಿನ ಎನ್ ಐಟಿ ಕೆ ಅಥವಾ ಎಂಐಟಿ ಯ ತಂತ್ರಜ್ಞರಿಂದ ಅದರ ಪಂಚಾಂಗದ ಪರಿಶೀಲನೆ ನಡೆಸಿ ಕಾಮಗಾರಿ ನಡೆಸಬೇಕು. ಹಣ ವ್ಯರ್ಥವಾಗದಂತೆ ಕಾಮಗಾರಿ ನಡೆಸಬೇಕು. ರಾಜ್ಯದಲ್ಲಿ ಈಗ ನಮ್ಮದೇ ಸರ್ಕಾರವಿದೆ. ಪ್ರವಾಸೋದ್ಯಮ ದೃಷ್ಟಿಯಲ್ಲಿ ನಡೆಯಬೇಕು ಎಂದರು.
ಕಾರ್ಕಳ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರುಶುರಾಮ ಥೀಮ್ ಪಾರ್ಕ್ ನಲ್ಲಿದ್ದ ಪರಶುರಾಮ ಮೂರ್ತಿ ಮಾಯವಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದೆ. ಇಂದು ಪರಶುರಾಮ ಥೀಂ ಪಾರ್ಕ್ ಗೇ ಭೇಟಿ ನೀಡಿದ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡುತ್ತಾ, ಹೀಗಾಗಿ ಬೃಹತ್ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಬೆಳಿಗ್ಗೆ 10:30 ಥೀಮ್ ಪಾರ್ಕಿನ ತಪ್ಪಲಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು. ಪ್ರತಿಭಟನೆಯ ಅಂಗವಾಗಿ ಬೆಳಿಗ್ಗೆ 10 ಘಂಟೆ ಪ್ರತಿಭಟನಕಾರರು ಕಾರ್ಕಳ ಪುಲ್ಕೇರಿ ಬೈಪಾನ್ ವೃತ್ತದಿಂದ ಒಟ್ಟಾಗಿ ವಾಹನದಲ್ಲಿ ತೆರಳಿ ಬೆಟ್ಟದ ತಪ್ಪಲನ್ನು ತಲುಪಲ್ಲಿದ್ದಾರೆ. ಕಾಂಗ್ರೆಸ್ ಸದಸ್ಯ ಸುರೇಂದ್ರ ಶೆಟ್ಟಿ, ಸುಭಿತ್ ಎನ್ ಆರ್, ಪ್ರತಿಮಾ ರಾಣಿ, ಶುಭದ ರಾವ್, ಅಣ್ಣಪ್ಪ ನಕ್ಷೆ, ಸಂದೀಪ್ ಶೆಟ್ಟಿ, ನಿತೇಶ್ ಶೆಟ್ಟಿ ಇದ್ದರು
