• Home  
  • (MLA visit to Nandikuru M 11 Company, Notice to solve the problem within 15 days)
- PROBLEMS

(MLA visit to Nandikuru M 11 Company, Notice to solve the problem within 15 days)

Share:  ನಂದಿಕೂರು ಎಂ11 ಕಂಪೆನಿಗೆ ಶಾಸಕರ ಭೇಟಿ 15 ದಿನಗಳೊಳಗೆ ಸಮಸ್ಯೆ ಪರಿಹರಿಸಲು ಸೂಚನೆ  (Padubidri) ಪಡುಬಿದ್ರಿ: ಇಲ್ಲಿನ ನಂದಿಕೂರಿನಲ್ಲಿರುವ ಒ11 ಇಂಡಸ್ಟ್ರೀಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆಯಲ್ಲಿ ಉದ್ಯೋಗ ನೀಡಬೇಕು ಮತ್ತು ಕಂಪನಿಯ ಆಸುಪಾಸಿನ ಮನೆಗಳ ಬಾವಿ ನೀರು ಕಲುಷಿತವಾಗುತ್ತಿದ್ದು, ಈ ಬಗ್ಗೆ 15 ದಿನಗಳ ಒಳಗಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದರು.  ಇಂದು ನಂದಿಕೂರಿನಲ್ಲಿರುವ ಒ11 ಇಂಡಸ್ಟ್ರೀಸ್‌ ಪ್ರೈವೇಟ್  ಲಿಮಿಟೆಡ್ ಕಂಪನಿಗೆ ಭೇಟಿ […]

 ನಂದಿಕೂರು ಎಂ11 ಕಂಪೆನಿಗೆ ಶಾಸಕರ ಭೇಟಿ

15 ದಿನಗಳೊಳಗೆ ಸಮಸ್ಯೆ ಪರಿಹರಿಸಲು ಸೂಚನೆ

 (Padubidri) ಪಡುಬಿದ್ರಿ: ಇಲ್ಲಿನ ನಂದಿಕೂರಿನಲ್ಲಿರುವ ಒ11 ಇಂಡಸ್ಟ್ರೀಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆಯಲ್ಲಿ ಉದ್ಯೋಗ ನೀಡಬೇಕು ಮತ್ತು ಕಂಪನಿಯ ಆಸುಪಾಸಿನ ಮನೆಗಳ ಬಾವಿ ನೀರು ಕಲುಷಿತವಾಗುತ್ತಿದ್ದು, ಈ ಬಗ್ಗೆ 15 ದಿನಗಳ ಒಳಗಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದರು.

 ಇಂದು ನಂದಿಕೂರಿನಲ್ಲಿರುವ ಒ11 ಇಂಡಸ್ಟ್ರೀಸ್‌ ಪ್ರೈವೇಟ್  ಲಿಮಿಟೆಡ್ ಕಂಪನಿಗೆ ಭೇಟಿ ನೀಡಿದರು.

ನಂದಿಕೂರಿನಲ್ಲಿ ಹೊಸದಾಗಿ ಆರಂಭಗೊಂಡಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್ ಮತ್ತು ಬಯೋಡೀಸಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

 ಫಲಿಮಾರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಯಿಂದ ಪರಿಸರ ಮಾಲಿನ್ಯವಾಗುತಿದ್ದು, ಕಂಪೆನಿಯ ಸುತ್ತಮುತ್ತಲ ಬಾವಿಯ ನೀರು ಕಲುಷಿತವಾಗಿದೆ. ಸ್ಥಳೀಯರಿಗೆ ಉದ್ಯೋಗ ದೊರಕುತಿಲ್ಲ ಎಂಬ ದೂರಿನ ಮೇರೆಗೆ ವಿವಿಧ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಕಂಪೆನಿಯ ಮುಖ್ಯಸ್ಥರೊಂದಿಗೆ ಕಂಪೆನಿಯ ಉದ್ಯೋಗವಕಾಶ ಹಾಗೂ ಕಂಪೆನಿಯ ವಿವರಗಳನ್ನು ಪಡೆದುಕೊಂಡರು.

ಈ ವೇಳೆ ಸ್ಥಳೀಯ ನಿವಾಸಿಗಳು ಕಂಪೆನಿಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದರು. ಕುಡಿಯುವ ನೀರಿನ ಬಾವಿ ಕಲುಷಿತಗೊಂಡಿದ್ದು, ಕುಡಿಯಲು ಅಯೋಗ್ಯ ಎಂದು ದೃಢಪಟ್ಟಿದೆ ಎಂದು ಸ್ಥಳೀಯರಾದ ನಾಗರಾಜ್ ಭಟ್ ದೂರಿದರು.

ಕಾಪು ತಹಶೀಲ್ದಾರ್ ಪ್ರತೀಭಾ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ ಪೈ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ್ ನಾಯಕ್, ಕಾರ್ಮಿಕ ಇಲಾಖೆಯ ಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ಡಿ.ಪಿ ಮಹೇಂದ್ರ, ಅಮೃತ, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.