ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Ashta Math scholar P. Lakshmi Narayan Sharma passes away)
ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Padubidri) ಪಡುಬಿದ್ರಿ : ನಡ್ಸಾಲು ತೋಡಬಳಿ ನಿವಾಸಿ ಪಡುಬಿದ್ರಿ ಲಕ್ಷ್ಮೀ ನಾರಾಯಣ ಶರ್ಮ(81) ವೃದ್ಧಾಪ್ಯದ ದೆಸೆಯಿಂದ ಶುಕ್ರವಾರ ಪಡುಬಿದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ದ್ವೈತ ಸಿದ್ಧಾಂತದ ಪ್ರಕಾಂಡ ಪಂಡಿತರಾಗಿದ್ದ ಲಕ್ಷ್ಮೀ ನಾರಾಯಣ ಶರ್ಮರವರು ಉಡುಪಿ ಅಷ್ಟಮಠದ ಹಿರಿಯ ಆಸ್ಥಾನ ವಿದ್ವಾಂಸರಲ್ಲಿ ಓರ್ವರಾಗಿದ್ದರು. ಅದಮಾರು ಮಠದ ಕಡೆಕೊಪ್ಲ ಗುರುಕುಲದಲ್ಲಿ ವೇದ ವಿದ್ಯಾಭ್ಯಾಸ ಮಾಡಿದ್ದ ಇವರು, ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ […]


