ಅಥಣಿಯ ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ ಸ್ಥಳೀಯರ ಆಕ್ರೋಶ (Locals demand completion of the toilet project stalled midway opposite G-Mart in Athani.)
ಅಥಣಿಯ ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ ಸ್ಥಳೀಯರ ಆಕ್ರೋಶ ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಉದಾಸೀನತೆಗೆ ಕೈಗನ್ನಡಿಯಾದ ಶೌಚಾಲಯ (Athani) ಅಥಣಿ: ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಉದಾಸೀನತೆಗೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಿಗಿ ಕಾಂಪ್ಲೆಕ್ಸ್ ಹಿಂಭಾಗದ ಸಾರ್ವಜನಿಕ ಶೌಚಾಲಯವೇ ಜೀವಂತ ಸಾಕ್ಷಿಯಾಗಿದೆ. ಜಿ-ಮಾರ್ಟ್ ಎದುರಿಗೆ ಆರಂಭವಾದ ಈ ಶೌಚಾಲಯ ಕಾಮಗಾರಿ ಅರ್ಧಕ್ಕೇ ನಿಂತು ತಿಂಗಳುಗಳೇ ಉರುಳಿದರೂ, ಅದನ್ನು ಪೂರ್ಣಗೊಳಿಸುವ ಮನಸ್ಸು ಮಾತ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಬಂದಿಲ್ಲ. ಪಟ್ಟಣದ ಹೃದಯಭಾಗದಲ್ಲೇ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅತ್ಯಗತ್ಯವಾಗಿ […]




